ಬಳ್ಳಾರಿ ; ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಬಳಿಯ ಹಾಕಿ ಮೈದಾನದಲ್ಲಿ ಜು. 2 ರಿಂದ ಜು. 6ರವರೆಗೆ ಪುರುಷರ ರಾಜ್ಯಮಟ್ಟದ ಸಬ್ ಜೂನಿಯರ್ (ಅಂ ಡರ್ 16) ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಬಳ್ಳಾರಿ ಹಾಕಿ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಸೈಫುಲ್ಲಾ ಹೇಳಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದೇ ಜು. 28ರಿಂದ ಚೆನ್ನೈನಲ್ಲಿ ರಾಷ್ಟ್ರ ಮಟ್ಟದ ಹಾಕಿ ಪಂದ್ಯ ನಡೆಯಲಿದ್ದು. ಇದರಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಗುವುದು. ಇದರಲ್ಲಿ ಬಳ್ಳಾರಿ, ರಾಯಚೂರು, ಬೆಳಗಾವಿ, ಧಾರವಾಡ, ಬಾಗಲಕೋಟೆ, ಕಲಬುರಗಿ, ಕೊಡಗು, ಶಿವಮೊಗ್ಗ , ಗದಗ, ಬೆಂಗಳೂರು, ಹಾವೇರಿ , ಹಾಸನ ಸೇರಿ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ಒಂದು ತಂಡದಲ್ಲಿ 18 ಆಟಗಾರರಂತೆ ಒಟ್ಟು 240 ಆಟಗಾರರು ಪಾಲ್ಗೂಳಲಿದ್ದಾರೆ ಎಂದರು.
ಲೀಗ್, ಸೆಮಿ ಹಾಗೂ ಫೈನಲ್ ಸೇರಿ ಒಟ್ಟು 16 ಪಂದ್ಯಗಳು ನೆಡಯಲಿವೆ. ಪ್ರತಿ ದಿನ ಒಂದು ತಂಡಕ್ಕೆ ಒಂದೇ ಪಂದ್ಯ ಆಯೋಜಿಸಬೇಕು ಎಂಬ ನಿಯಮದಿಂದ ದಿನಕ್ಕೆ 4 ಪಂದ್ಯಗಳು ನಡೆಯಲಿವೆ. ಪ್ರತಿಯೊಬ್ಬರಿಗೂ ಊಟ ಹಾಗೂ ವಸತಿ ವ್ಯವಸ್ಥೆಯಿದೆ. ಈ ಪಂದ್ಯಾವಳಿಯನ್ನು ಹಾಕಿ ಬಳ್ಳಾರಿ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದೆ ಎಂದರು. ಸಂಸ್ಥೆ ಕಾರ್ಯದರ್ಶಿ ಎಸ್. ಕೃಷ್ಣ ರೆಡ್ಡಿ, ಸಹ ಕಾರ್ಯದರ್ಶಿ ಮಹೇಶ, ಕೋಚ್ ಶ್ರೀಧರ ಬಾಬು ಇದ್ದರು.