ಕೊಲೆಗಾರನಿಗೆ ಮರಣ ದಂಡನೆ ವಿಧಿಸಿ

bellary neha murder case
ನೇಹಾ ಹತ್ಯೆ ಖಂಡಿಸಿ ಬಳ್ಳಾರಿಯಲ್ಲಿ ಪ್ರಜ್ಞಾವಂತ ನಾಗರಿಕರಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಉರಳಗೋಳ ಸ್ವಾಮೀಜಿ, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ, ವೀವಿ ಸಂಘದ ಮಾಜಿ ಅಧ್ಯಕ್ಷ ಗುರುಸಿದ್ದಸ್ವಾಮಿ, ಪ್ರಮುಖರಾದ ಗಂಗಾವತಿ ವೀರೇಶ, ಕೆ.ಎಂ.ಮಹೇಶ್ವರ ಸ್ವಾಮಿ ಇತರರಿದ್ದರು.
Published on

ಬಳ್ಳಾರಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ, ಪ್ರಜ್ಞಾವಂತ ನಾಗರಿಕರು, ಪ್ರತಿಭಟನೆ, Bellary, student Neha Hiremath murder case, conscious citizens, protest,

ಬಳ್ಳಾರಿ: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಇಲ್ಲಿನ ರೈಲು ನಿಲ್ದಾಣದ ಗಾಂಧಿ ಪ್ರತಿಮೆ ಬಳಿ ನಗರದ ಪ್ರಜ್ಞಾವಂತ ನಾಗರಿಕರು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕಳೆದ ಎರಡು ವರ್ಷದಿಂದ ನೇಹಾಗೆ ಕಿರುಕುಳ, ಜೀವ ಬೆದರಿಕೆ ಹಾಕಿ ಕೊಲೆಗೈದ ಫಯಾಜ್ ವಿರುದ್ಧ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರು ಯಾವುದೇ ಕ್ರಮವಹಿಸದಿರುವುದು ಅವಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಕೊಲೆಗಾರನಿಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ನೇಹಾ ಕುಟುಂಬದ ಜತೆ ಬಳ್ಳಾರಿ ಪ್ರಜ್ಞಾವಂತ ನಾಗರಿಕರು ಇರುವೆವು ಎಂಬ ನಾಮಫಲಕ ಪ್ರದರ್ಶಿಸಿದರು. ವೀವಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕಲ್ಗುಡಿ ಮಂಜುನಾಥ, ಪ್ರಮುಖರಾದ ಕೋರಿ ವಿರೂಪಾಕ್ಷಪ್ಪ, ಕೆರೆನಹಳ್ಳಿ ಚಂದ್ರಶೇಖರ, ಎಚ್.ಎಂ.ಕಿರಣ್ ಕುಮಾರ, ಮಹೇಂದ್ರಕುಮಾರ, ವೀರಭದ್ರಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net