ನಿರುದ್ಯೋಗಿ ಯುವಜನ ಸಮಾವೇಶಕ್ಕೆ ಬನ್ನಿ

060922 Ballari Poster of State Level Unemployed Youth Convention
ಬಳ್ಳಾರಿಯ ಕೇಂದ್ರ ಗ್ರಂಥಾಲಯದ ಬಳಿ ರಾಜ್ಯಮಟ್ಟದ ನಿರುದ್ಯೋಗಿ ಯುವಜನ ಸಮಾವೇಶದ ಭಿತ್ತಿಪತ್ರವನ್ನು ಸಮಿತಿ ಉಪಾಧ್ಯಕ್ಷ ಶರಣಪ್ಪ ಉದ್ಬಾಳ್ ಬಿಡುಗಡೆಗೊಳಿಸಿದರು.
Published on

ಬಳ್ಳಾರಿ: ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ ಸಭಾಂಗಣದಲ್ಲಿ ಸೆ.22 ರಂದು ನಡೆಯಲಿರುವ ರಾಜ್ಯಮಟ್ಟದ ನಿರುದ್ಯೋಗಿ ಯುವಜನ ಸಮಾವೇಶಕ್ಕೆ ಬಳ್ಳಾರಿಯ ಉದ್ಯೊಗಾಕಾಂಕ್ಷಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ ಉಪಾಧ್ಯಕ್ಷ ಶರಣಪ್ಪ ಉದ್ಬಾಳ್ ಹೇಳಿದರು.

ನಗರದ ಕೇಂದ್ರ ಗ್ರಂಥಾಲಯದ ಬಳಿ ಮಂಗಳವಾರ ರಾಜ್ಯಮಟ್ಟದ ನಿರುದ್ಯೋಗಿ ಯುವಜನ ಸಮಾವೇಶದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ನಿರುದ್ಯೋಗ ಒಂದು ಪೆಡಂಭೂತವಾಗಿ ಕಾಡುತ್ತಿದೆ. ನಮ್ಮನ್ನು ಹಾಳುವ ಸರ್ಕಾರಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿವೆ. ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಕರೆದ ಕೆಲವು ಹುದ್ದೆಗಳಲ್ಲಿ ಸಹ ಅಕ್ರಮ ಎಸಗಿ ಯುವಜನರಿಗೆ ದ್ರೋಹ ಬಗೆಯಲಾಗುತ್ತಿದೆ. ಕೇವಲ ಭಾಷಣಗಳಿಗೆ ಸೀಮಿತವಾದ ಆಡಳಿತ ಮತ್ತು ವಿರೋಧ ಪಕ್ಷಗಳ ಮಾತುಗಳಿಂದ ಯುವ ಜನರು ಜಾತಕ ಪಕ್ಷಿಗಳಂತೆ ಉದ್ಯೋಗ ಸಿಗುವ ಭರವಸೆಯಿಂದ ಕಾಯುತ್ತಿದ್ದಾರೆ. ಆದ್ದರಿಂದ, ಭ್ರಷ್ಟ ಸರ್ಕಾರಗಳ ವಿರುದ್ಧ ಯುವಜನರು ಹೋರಾಟ ನಡೆಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net