ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

Published on

ಬಳ್ಳಾರಿ ; ರಾಜ್ಯಾದ್ಯಂತ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಪರೀಕ್ಷೆ ಸಕಲ ಸಿದ್ಧತೆ ಕೈಗೊಂಡಿದೆ.

ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬಳ್ಳಾರಿ ಪೂರ್ವ 5044, ಬಳ್ಳಾರಿ ಪಶ್ಚಿಮ 8,579, ಸಂಡೂರು 3,788 ಮತ್ತು ಸಿರಗುಪ್ಪ 4,145 ಸೇರಿ ಒಟ್ಟು 21,553 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದಲ್ಲದೆ 704 ಖಾಸಗಿ, 1,109 ಪುನರಾವರ್ತಿತ ಹಾಗೂ ಇತರೆ 158 ವಿದ್ಯಾರ್ಥಿಗಳು ಸೇರಿದಂತೆ 23,524 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸನ್ನದ್ಧರಾಗಿದ್ದಾರೆ. ಒಟ್ಟಾರೆ ಜಿಲ್ಲೆಯ 320 ಪ್ರೌಢಶಾಲೆಗಳ ಒಟ್ಟು 23,524 ವಿದ್ಯಾರ್ಥಿಗಳು ಬರೆಯಲು ಸಜ್ಜಾಗಿದ್ದಾರೆ.

443 ಸಿಬ್ಬಂದಿ ನಿಯೋಜನೆ : ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಸ್ರೂತವಾಗಿ ಆಯೋಜಿಸಲು 64 ಕೇಂದ್ರ ಮುಖ್ಯಅಧೀಕ್ಷಕರು, 34 ಕೇಂದ್ರ ಉಪ ಮುಖ್ಯಅಧೀಕ್ಷಕರು, 64 ಪ್ರಶ್ನೆ ಪತ್ರಿಕೆ ಪಾಲಕರು, 64 ಸ್ಥಾನಿಕ ಜಾಗೃತಿ ದಳ, 64 ಮೊಬೈಲ್ ಸ್ವಾಧೀನ ಅಧಿಕಾರಿ, 25 ರೂಟ್ ಆಫೀಸ್ ಹಾಗೂ 64 ಗ್ರೂಪ್ ‘ಡಿ’ ಸೇರಿ ಒಟ್ಟು 443 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟು ಜಿಲ್ಲೆಯಲ್ಲಿ 64 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಅದರಲ್ಲಿ ಬಳ್ಳಾರಿ, ಮೋಕಾ ಮತ್ತು ಬಿ.ಎಂ.ಸುಗೂರು ಪರೀಕ್ಷೆ ಕೇಂದ್ರಗಳು ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಪರಿಗಣಿಸಲಾಗಿದೆ.

ಲಿತಾಂಶ ಸುಧಾರಣೆಗೆ ಕಸರತ್ತು: ಕಳೆದ ಸಾಲಿನ ಲಿತಾಂಶದಲ್ಲಿ ಜಿಲ್ಲೆ 28ನೇ ರ‌್ಯಾಂಕ್ ಗಳಿಸಿತ್ತು. ಆದರೆ ಈ ಬಾರಿ ಲಿತಾಂಶ ಸುಧಾರಣೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಇನ್ನಷ್ಟು ಕಳೆದ ಬಾರಿಗಿಂತ ಲಿತಾಂಶ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿವಿಧ ಕಸರತ್ತು ನಡೆಸಿದೆ. ಕಲಿಕಾ ಆಸರೆ, ಪ್ರತಿಬಿಂಬ ಎನ್ನುವ ಅಭ್ಯಾಸ ಪುಸ್ತಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಗಿದೆ. ಜತೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಜ್ಯ ಮತ್ತು ಜಿಲ್ಲಾ ಹಂತದ ಎರಡು ಪ್ರತ್ಯೇಕ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಸಿದೆ. ಘಟಕ ಪರೀಕ್ಷೆಗಳನ್ನು 15 ದಿನಗಳಿಗೊಮ್ಮೆ ನಡೆಸಲಾಗಿದೆ. ಯಾವುದೇ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳು ಪ್ರತಿ ವಿಷಯದ ಕನಿಷ್ಠ 24 ಪ್ರಶ್ನೆಗಳಿಗೆ ತಯಾರಿ ನಡೆಸಲಾಗಿದೆ ಎನ್ನಲಾಗಿದೆ.

923 ಪರೀಕ್ಷೆಯಿಂದ ದೂರ : ಜಿಲ್ಲೆಯಲ್ಲಿ ಹಾಜರಾತಿ ಕೊರತೆಯಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ 923 ವಿದ್ಯಾರ್ಥಿಗಳು ದೂರ ಉಳಿಯುವ ಸಾಧ್ಯತೆಯಿದೆ. ಪರೀಕ್ಷೆಗೆ ಬರೆಯಲು ಶೇ.75% ರಷ್ಟು ಹಾಜರಾತಿ ಕಡ್ಡಾಯವಾಗಿದೆ. ಆದರೆ 923 ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯಿಂದ ಪರೀಕ್ಷೆ ಪ್ರವೇಶ ಪತ್ರ ನೀಡಲು ಸಾಧ್ಯವಿಲ್ಲ. ಕೆಲವೊಂದು ವಿದ್ಯಾರ್ಥಿಗಳಿಗೆ ಆರೋಗ್ಯ ವಿಚಾರವಾಗಿ ವಿನಾಯಿತಿ ನೀಡಬಹುದು. ಇನ್ನೂಳಿದ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಾಗಿದೆ.

ಕೋಟ್... ಕಳೆದ ಸಾಲಿಗಿಂತ ಈ ಬಾರಿ ಫಲಿತಾಂಶ ಸುಧಾರಿಸಲು ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ. ಅಲ್ಲದೆ, ಕಲಿಕೆಯಲ್ಲಿ ಹಿಂದೆ ಉಳಿದ ಮಕ್ಕಳಿಗೆ ಭಾನುವಾರ ಕೂಡ ತರಗತಿ ನಡೆಸಿ ಕಲಿಕೆ ಅನುಕೂಲ ಮಾಡಲಾಗಿದೆ. ಎಲ್ಲ ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾದದೇ ಪರೀಕ್ಷೆಗೆ ಬರೆಯಬಹುದು.

-ಬಿ.ಉಮಾದೇವಿ, ಡಿಡಿಪಿಐ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net