ಮಂತ್ರಾಲಯ ಮಠದಿಂದ ವಿಶ್ವವಿದ್ಯಾಲಯ ಸ್ಥಾಪನೆ: ವಿದ್ವಾನ್ ರಾಜಾ ಎಸ್.ಗಿರಿ ಆಚಾರ್ಯ ಹೇಳಿಕೆ

29122020 Bellary VV Convocation
Published on

ವಿಎಸ್‌ಕೆ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ

ಬಳ್ಳಾರಿ: ಮಂತ್ರಾಲಯ ಮಠದಿಂದ ಶ್ರೀ ರಾವೇಂದ್ರ ಸ್ವಾಮಿ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಪೂರ್ವಾಶ್ರಮದ ತಂದೆ ಹಾಗೂ ವಿದ್ವಾನ್ ರಾಜಾ ಎಸ್.ಗಿರಿ ಆಚಾರ್ಯ ಹೇಳಿದರು.

ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಎಂಟನೇ ಘಟಿಕೋತ್ಸವದಲ್ಲಿ ಕುಲಪತಿ ಸಿದ್ದು ಪಿ. ಅಲಗೂರು ಅವರಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದರು. ಶ್ರೀದಲ್ಲೇ ಅಸ್ತಿತ್ವಕ್ಕೆ ಬರಲಿರುವ ರಾವೇಂದ್ರ ಸ್ವಾಮಿ ವಿಶ್ವವಿದ್ಯಾಲಯಕ್ಕೆ ವಿಎಸ್‌ಕೆ ವಿವಿಯ ಆಡಳಿತ ಮಂಡಳಿಯವರು ಅಗತ್ಯ ಸಲಹೆಗಳನ್ನು ನೀಡಬೇಕೆಂದು ಕೋರಿದರು.

ನನ್ನ ಸಾಧನೆ ಅತ್ಯಲ್ಪವಾದರೂ ವಿಎಸ್‌ಕೆ ವಿವಿಂದ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗುತ್ತಿದೆ. ನನಗೆ ಬೇರೆ ಸನ್ಮಾನಗಳು ದೊರೆತಿದ್ದರೂ ವಿಎಸ್‌ಕೆ ವಿವಿಯ ಗೌರವ ಡಾಕ್ಟರೇಟ್ ವಿಶೇಷವಾಗಿದೆ. ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣ ದೇವರಾಯನ ಹೆಸರು ಇರುವುದು ಅದಕ್ಕೆ ಕಾರಣ. ಶ್ರೀಕೃಷ್ಣದೇವರಾಯ ವಿದ್ವಾಂಸರನ್ನು ಗೌರವದಿಂದ ಕಾಣುತ್ತಿದ್ದರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net