ಶ್ರೀ ಮಹಾದೇವ ತಾತಾ ಸಿನಿಮಾ ಶೀಘ್ರ ಬಿಡುಗಡೆ

24042022 purushotamma
Published on

ಬಳ್ಳಾರಿ: ಪವಾಡ ಪುರುಷ ಅಲ್ಲೀಪುರ ಶ್ರೀ ಮಹಾದೇವ ತಾತಾ ಭಕ್ತಿ ಪ್ರಧಾನ ಚಲನ ಚಿತ್ರವನ್ನು ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಪುರುಷೋತ್ತಮ ಓಂಕಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ಸೆನ್ಸಾರ್ ಬೋರ್ಡ್‌ನವರು ಸಿನಿಮಾ ನೋಡಿದ್ದು ಚೆನ್ನಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಾಜು 85 ಲಕ್ಷ ರೂ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಚಲಚಿತ್ರ ಬಿಡುಗಡೆಯಾಗುವ ವೇಳೆಗೆ ಒಂದು ಕೋಟಿ ರೂ. ವೆಚ್ಚವಾಗಲಿದೆ. ಮಹದೇವತಾತಾ ಓಡಾಡಿದ ಸ್ಥಳಗಳು ಸೇರಿದಂತೆ ಬಳ್ಳಾರಿ, ಬೆಂಗಳೂರು, ನಂಜನಗೂಡು ಸಂಗಮದ ಬಳಿ ಸಿನಿಮಾ ಚಿತ್ರೀಕರಿಸಲಾಗಿದೆ. ಐದು ಹಾಡುಗಳಿದ್ದು, ಅಜಯ್ ವಾರಿಯರ್, ಸಚಿನ್, ರೇಷ್ಮಾ ಬಾಲು ಹಾಡಿದ್ದಾರೆ. ರಾಜಭಾಸ್ಕರ್ ಸಂಗೀತ ನೀಡಿದ್ದಾರೆ. ಐತಿಹಾಸಿಕ ಸಿನಿಮಾಗೆ ಚಿತ್ರ 25 ಲಕ್ಷ ರೂ ಸಹಾಯಧನ ಸಿಗಲಿದೆ ಎಂದರು.

ಸ್ಥಳೀಯ ಹಿರಿಯ ರಂಗನಟ ರಮೇಶ್ ಗೌಡ ಪಾಟೀಲ್, ಕಲಾವಿದರಾದ ರಘು, ಉಷಾ, ವಾಮಣ್ಣ, ರಾಜ್‌ಭಾಸ್ಕರ್, ಶ್ರೀವಿಷ್ಣು, ಶಿವಲಿಂಗಸ್ವಾಮಿ, ಸೋಮನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net