ಶ್ರೀ ಗುರುಸಾರ್ವಭೌಮರ ಮಧ್ಯಾರಾಧನೆ

Published on

ಬಳ್ಳಾರಿ ; ನಗರದ ರೇಡಿಯೋ ಪಾರ್ಕ್ ನ ಶ್ರೀ ವ್ಯಾಸರಾಜ (ಸೋಸಲೆ) ಶ್ರೀ ಮೂಲ ಗೋಪಾಲಕೃಷ್ಣ ಮತ್ತು ಶ್ರೀ ಆಂಜನೇಯ ಸಹಿತ, ಶ್ರೀ ಜಯತೀರ್ಥರು, ಶ್ರೀ ಪಾದರಾಜರು, ಶ್ರೀ ವ್ಯಾಸರಾಜರ, ಶ್ರೀ ವಾದಿರಾಜರ ಹಾಗೂ ಶ್ರೀ ಗುರು ಸಾರ್ವಭೌಮರ ಸನ್ನಿಧಾನದಲ್ಲಿ ಸೋಮವಾರ ಶ್ರೀ ಗುರುಸಾರ್ವಭೌಮರ ಮಧ್ಯಾರಾಧನೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ ಶ್ರೀ ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಪಾರಾಯಣ, ಶ್ರಿಹರಿವಾಯುಸ್ತುತಿ ಮಂತ್ರ ಪಠಣೆ, ಹೊಸಪೇಟೆಯ ಪಂ. ಶ್ರೀ ವಿಶ್ವನಾಥ ಆಚಾರ್ಯರು ಸೇರಿದಂತೆ ವಿವಿಧ ಪಂಡಿತರಿಂದ ವಿಶೇಷ ಉಪನ್ಯಾಸ, ಅಲಂಕಾರ, ಪಂಚಾಮೃತಾಭಿಷೇಕ, ಹಸ್ತೊದಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನೆರವೇರಿದವು. ನಗರ ಸೇರಿದಂತೆ ನಾನಾ ಕಡೆಯಿಂದ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ, ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ ಶ್ರೀ ಗುರುರಾಯರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಶ್ರೀ ವ್ಯಾಸರಾಜ ಶ್ರೀಮಠದ ಪ್ರಧಾನ ಅರ್ಚಕರಾದ

ಶ್ರೀ ಪಾಂಡುರಂಗ ಆಚಾರ್ಯ ಅವರ ನೇತೃತ್ವದಲ್ಲಿ ಪೂಜೆಗಳು ವಿಜೃಂಭಣೆಯಿಂದ ನಡೆದವು. ಇದಕ್ಕೂ ಮುನ್ನ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಭಜನೆ, ನಡೆಯಿತು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಸಂಜೆ ಶ್ರೀಮಠದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆದವು. ಶ್ರೀಮಠದ ಎಲ್ಲ ಪದಾಧಿಕಾರಿಗಳು, ವಿವಿಧ ಗಣ್ಯರು, ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net