ಸಾಹಿತ್ಯದಿಂದ ಕೆಲ ಬದಲಾವಣೆ ಸಾಧ್ಯ

Published on

ಬಳ್ಳಾರಿ : ಸಾಹಿತ್ಯ ಸೃಷ್ಟಿ ಯಿಂದ ಸಮಾಜವನ್ನು ಬದಲಾಯಿಸಲಾಗುವುದಿಲ್ಲ. ಕೆಲ ಬದಲಾವಣೆ ಮಾಡಬಹುದು ಎಂದು ಹಿರಿಯ ರಂಗಕರ್ಮಿ ಡಾ.ಶಶಿಧರ ನರೇಂದ್ರ ಅಭಿಪ್ರಾಯಪಟ್ಟರು.

ನಗರದ ಬಿಪಿಎಸ್ ಸಿ ಸಭಾಂಗಣದಲ್ಲಿ ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಿಂದ ಡಾ.ಎಸ್‌. ಎಲ್.ಬೈರಪ್ಪನವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸ್ತ್ರಿಯ ಸಂಗೀತ ಮಾತ್ರ ಶುದ್ಧ ಸಂಗೀತ. ಅನುಭವ - ಅನನುಭಾವ ಇದ್ದಾಗಲೇ ಬರಹಗಾರನಿಂದ ಕೃತಿ ರಚನೆ ಸಾಧ್ಯ. ಒಂದು ಕೃತಿಯ ಸೃಷ್ಟಿಯ ಪ್ರಭಾವದಿಂದ ಹೊರ ಬರಲು ಇನ್ನೊಂದು ಕೃತಿಯ ರಚನೆ, ಕೃತಿಕಾರ ತಕ್ಷಣ ಪ್ರತಿಕ್ರಿಯೆ ಯಿಂದ ಬರೆಯಲು ಮುನ್ನುಗ್ಗಬಾರದು. ಮತ್ತೆ ಮತ್ತೆ ತಿದ್ದುತ್ತಾ, ಪರಿಷ್ಕೃರಿಸುತ್ತಾ ಕೃತಿಗೆ ಅಂತಿಮ ರೂಪ ಕೊಡಬೇಕು ಎಂದರು.

ಲೇಖಕನಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಆತ ಸಮಾಜದಿಂದ ಹೊರತಲ್ಲ ಬದಲಿಸಬಲ್ಲೇ ಎನ್ನುವ ಕ್ರಾಂತಿಯ ಭ್ರಾಂತಿ ಗಿಂತಲೂ ಸಮಾಜಕ್ಕೆ ನಾನೇನು ಕೊಡಬಲ್ಲೆ ಎನ್ನುವ ಸೃಜನಶೀಲತೆಯಿಂದ ವಿಚಾರ ಮಾಡಬೇಕು ಎಂದು ಹೇಳಿದರು.

ಗಾಂಧೀಜಿಯವರು ತಮ್ಮ ಆತ್ಮಕಥೆ ಯಲ್ಲಿ ಬರೆದದ್ದೆಲ್ಲವೂ ಸತ್ಯ. ಆದರೆ ಬರೆಯದೇ ಇರುವ ಸತ್ಯಗಳೂ ಇದ್ದುವು ಎಂಬುದು "ಸತ್ಯದರ್ಶನ"ದ ಬಗೆಗಿನ ಭೈರಪ್ಪ ನವರ ವಿಚಾರವಾಗಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net