ಸಮಾಜ ಕಾರ್ಯವು ವಿಶ್ವಮಾನ್ಯವಾದುದು

Published on

ಬಳ್ಳಾರಿ ; ಮಾನವ ಕಲ್ಯಾಣಕ್ಕೆ ಸಹಕಾರಿಯಾಗಿರುವ ಸಮಾಜ ಕಾರ್ಯವು ವಿಶ್ವ ಮಾನ್ಯತೆಯನ್ನು ಪಡೆದಿದೆ. ಇಂದಿಗೂ ಸಾಮಾಜಿಕ ಕಾಳಜಿ ಇರುವ ವೃತ್ತಿಪರ ಸಮಾಜ ಕಾರ್ಯಕರ್ತರ ಸಾಮಾಜಿಕ ಸೇವೆಯು ಶ್ಲಾಘನೀಯ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಅಭಿಪ್ರಾಯ ಪಟ್ಟರು.

ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಸಮಾಜ ಕಾರ್ಯ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಸಮಾಜ ಕಾರ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳನ್ನು ಕಾಪಾಡುವಲ್ಲಿ, ಶೋಷಿತ ಮಹಿಳೆಯರು, ಮಕ್ಕಳು, ವೃದ್ಧರು, ಅನಾಥರು ಮತ್ತು ದೀನ ದುರ್ಬಲರನ್ನು ಆರೈಕೆ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು ಕೃತಜ್ಞತೆಯಿಂದ ನೆನೆಯುವ ದಿನವಾಗಿ ವಿಶ್ವ ಸಮಾಜ ಕಾರ್ಯ ದಿನವನ್ನು 1983ರಿಂದ ಸಾಮಾಜಿಕ ಕಾರ್ಯಕರ್ತರ ಅಂತಾರಾಷ್ಟ್ರೀಯ ಒಕ್ಕೂಟವು ಆಚರಿಸುತ್ತಾ ಬಂದಿದೆ. ಪ್ರಪಂಚದಾದ್ಯಂತ ಪ್ರತಿ ಮಾರ್ಚ್ ತಿಂಗಳ ಮೂರನೇ ಮಂಗಳವಾರ ವಿಶ್ವ ಸಮಾಜ ಕಾರ್ಯ ದಿನವನ್ನು ಆಚರಿಸಲಾಗುವುದು ಎಂದರು.

ಕುಲಸಚಿವ ಎಸ್.ಎನ್.ರುದ್ರೇಶ ಮಾತನಾಡಿ ಬುದ್ದ, ಬಸವ ಅಂಬೇಡ್ಕರ್, ಲೋಹಿಯಾ, ಶಾಂತವೇರಿ ಗೋಪಾಲ ಗೌಡರ ತತ್ವಾದರ್ಶಗಳು ಇಂದಿನ ವಿದ್ಯಾರ್ಥಿ ಸಮಾಜ ಕಾರ್ಯಕರ್ತರಿಗೆ ಮಾದರಿಯಾಗಿವೆ ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ.ಸಾಲಿ ಮಾತನಾಡಿ, ಕರ್ನಾಟಕ ಕಂಡ ಅಪರೂಪದ ಸಮಾಜ ಸೇವಕ, ನಾಡಿಗೆ ನಾಡೇ

ನೆನೆಯುತ್ತಿರುವ ಡಾ.ಪುನೀತ್ ರಾಜ್ ನಮಗೆ ಆದರ್ಶರು ಮತ್ತು ಹೊಸಪೇಟೆಯಲ್ಲಿ ತನ್ನ ಹದಿನೇಳನೇ ವಯಸ್ಸಿಗೆ ತಮ್ಮ ದುಡಿಮೆಯ ಬಹುಪಾಲನ್ನು ಅನಾಥ ಮತ್ತು ವಿಕಲ ಚೇತನ ಮಕ್ಕಳಿಗೆ ಮೀಸಲಿರಿಸಿ ಸೇವೆ ಮಾಡುತ್ತಿರುವ ಕಾವ್ಯ ನಮಗೆ ಆದರ್ಶವೆಂದು ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net