ಸಾಹಿತ್ಯದಿಂದ ಸಮಾಜ ಬದಲಾವಣೆ

Published on

ಬಳ್ಳಾರಿ : ಕಾವ್ಯದ ಸಾಲುಗಳಿಗೆ ಅಭಿನಯದಿಂದ ಒಂದು ರೂಪವನ್ನು ಕೊಟ್ಟು ಸಂಗೀತ, ನೃತ್ಯ ಹಾಗೂ ನಾಟಕಗಳ ಮೂಲಕ ಜೀವ ತುಂಬಿ ಕಲಾವಿದರು ಸಮಾಜದ ದಿಕ್ಕನ್ನ ಬದಲಾಯಿಸುತ್ತಾರೆ ಎಂದು ಬೆಂಗಳೂರು ಪ್ರದರ್ಶನ ಕಲಾ ವಿಭಾಗ ವಿಶ್ವ ವಿದ್ಯಾಲಯದ ಪ್ರೊ.ರಾಮಕೃಷ್ಣಯ್ಯ ಹೇಳಿದರು.

ನಗರದ ಸೋನಿಯಾ ಗಾಂಧಿ ಶಿಕ್ಷಣ ಸಂಸ್ಥೆಯಲ್ಲಿ ರಂಗಜಂಗಮ ಸಂಸ್ಥೆ ಆದಿವಾಸಿ ಸಾಹಿತ್ಯ ಮತ್ತು ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ‘ರಂಗಭೂಮಿ ಕಾಲಾತಿತ ಅಸ್ತಿತ್ವ ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಮನುಷ್ಯನ ಬೆಳವಣಿಗೆಗೆ ಮತ್ತು ವಿವಿಧ ಆಯಾಮಗಳನ್ನು ಕಂಡುಕೊಳ್ಳಲು ಸಮಾಜದಲ್ಲಿನ ಸ್ತರ ವ್ಯವಸ್ಥೆಗಳನ್ನು ಅವಲೋಕಿಸಿ ಪರಿವರ್ತನೆಯ ವಿವಿಧ ದಾರಿಗಳು ದೊರೆಯುವಂತೆ ಮಾಡುವ ಗಟ್ಟಿ ತಾಕತ್ತು ಕಾವ್ಯದಲ್ಲಿದೆ ಎಂದರು.

ವಿಎಸ್‌ಕೆ ವಿವಿಯ ಕಲೆ ನಾಟಕ ವಿಭಾಗದ ಪ್ರೊ. ಶಾಂತನಾಯಕ್ ಮಾತನಾಡಿ, ಎಲ್ಲ ಜನಪದ ಸಾಹಿತ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೆಲವು ಇತಿಮಿತಿಗಳನ್ನ ಮಾತ್ರ ರಂಗದ ಮೇಲೆ ತರಲು ಸಾಧ್ಯವಾಗುತ್ತದೆ. ಆದರೆ, ಸಾಹಿತ್ಯದ ಮೂಲಕ ಕಥೆಗಳ ಮೂಲಕ ಕವನಗಳ ಮೂಲಕ ಕಾದಂಬರಿಗಳ ಮೂಲಕ ಮನಸ್ಸಿನ ಎಲ್ಲ ಭಾವನೆಗಳನ್ನ ಸಾಹಿತಿಕವಾಗಿ ಅಕ್ಷರ ರೂಪದಲ್ಲಿ ಇಳಿಸಲು ಸಾಧ್ಯವಿದೆ. ಅಂತಹ ಪುಸ್ತಕಗಳ ಸಂಪಾದಕತ್ವ ಮತ್ತು ಲೇಖಕರಾಗಿ ಈ ನಾಡಿಗೆ ಏನಾದರೂ ಒಂದು ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ತಾವೆಲ್ಲರೂ ಪ್ರಯತ್ನ ಪಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net