ಆರು ಪ್ರತ್ಯೇಕ ಪ್ರಕರಣ, 57.86 ಲಕ್ಷ ರೂ. ವಂಚನೆ

Published on

ಬಳ್ಳಾರಿ ; ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ 57 ಲಕ್ಷ ರೂ. ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಧಿಕ ಲಾಭಾಂಶ ನೀಡುವ ನೆಪದಲ್ಲಿ ಕುಡಿತಿನಿಯ ವ್ಯಕ್ತಿಯೊಬ್ಬರಿಗೆ 13.08 ಲಕ್ಷ ರೂ., ವಾಟ್ಸ್‌ಆ್ಯಪ್‌ಗೆ ಬಂದ ಎಪಿಕೆ ಫೈಲ್ ಕ್ಲಿಕ್‌ಸಿದ ಗೃಹಿಣಿಯೊಬ್ಬರಿಗೆ 33 ಸಾವಿರ ರೂ., ಡೆಲಿವರಿ ಪ್ರಾಂಚೈಸಿ ತೆಗೆದುಕೊಂಡರೆ ಮಾಸಿಕ ಮೂವತ್ತು ಸಾವಿರ ರೂ. ನೀಡುವುದಾಗಿ ಜಿಂದಾಲ್‌ನ ಟೌನ್‌ಶಿಪ್ ವ್ಯಕ್ತಿಯೊಬ್ಬರಿಗೆ 6.50 ಲಕ್ಷ ರೂ., ಜಿಂದಾಲ್‌ನ ಮಹಿಳೆಯೊಬ್ಬರಿಗೆ ಗಮನಕ್ಕೆ ಬಾರದೆ ಖಾತೆಯಲ್ಲಿದ್ದ 95 ಸಾವಿರ ರೂ., ಬೆಂಗಳೂರಿನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ 17.70 ಲಕ್ಷ ರೂ., ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಅಮಿಷವೊಡ್ಡಿ ನಗರದ ಸರ್ಕಾರಿ ಅದಿಕಾರಿಯೊಬ್ಬರಿಗೆ 19.30 ಲಕ್ಷ ರೂ. ಸೇರಿ ಒಟ್ಟಾರೆ 57 ಲಕ್ಷ ರೂ. ವಂಚಿಸಲಾಗಿದೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net