ಸಿದ್ದರಾಮೇಶ್ವರರ ಕಾಯಕ ಜೀವನ ಮಾದರಿ -ಸಿದ್ದಲಿಂಗೇಶ ರಂಗಣ್ಣವರ್ ಹೇಳಿಕೆ

140121 Ballari Siddarameshwara Jayanti
ಬಳ್ಳಾರಿಯ ಬಿಡಿಎ ಸಭಾಂಗಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಗುರುವಾರ ಆಯೋಜಿಸಲಾಗಿತ್ತು.
Published on

ಬಳ್ಳಾರಿ: ಶಿವಯೋಗಿ ಸಿದ್ದರಾಮೇಶ್ವರ ಅವರ ಕಾಯಕ ಹಾಗೂ ಬದುಕು ಇಂದಿನ ಯುವಕರಿಗೆ ಮಾದರಿಯಾಗಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಅಭಿಪ್ರಾಯಪಟ್ಟರು.

ನಗರದ ಬಿಡಿಎ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುವಾರ ಆಯೋಜಿಸಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಸಿದ್ದರಾಮೇಶ್ವರ, ಸಮಾಜದ ಒಳಿತಿಗಾಗಿ ದುಡಿದಿದ್ದಾರೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ತಹಸೀಲ್ದಾರ್ ರೆಹಾನ್ ಪಾಷಾ, ಜಿಲ್ಲಾ ಭೋವಿ ಸಂದ ಅಧ್ಯಕ್ಷ ಪಿ.ವಿ.ರಾಜಗೋಪಾಲ್, ಕಾರ್ಯದರ್ಶಿ ವಿ.ಗಾದಿಲಿಂಗ, ನಿರ್ದೇಶಕ ವಿ.ಕುಬೇರ, ಸದಸ್ಯರಾದ ಶೇಷಣ್ಣ, ಟಿ.ವೆಂಕಟೇಶ, ವಿ.ವೆಂಕಟೇಶ, ವೈ.ಕೊಟ್ರೇಶ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net