ಸಿದ್ದರಾಮಯ್ಯ ಪೂರ್ಣವಧಿಯ ಸಿಎಂ

Published on

ಬಳ್ಳಾರಿ : ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಪೂರ್ಣವಧಿಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಮಾಜಿ ಸಿಎಂ ದಿ.ದೇವರಾಜ್ ಅರಸು ಬಿಟ್ಟರೆ ಎರಡನೇ ಬಾರಿಗೆ ಆಯ್ಕೆಯಾಗಿರುವುದು ಸಿದ್ದರಾಮಯ್ಯ ಒಬ್ಬರೇ. ಆದ್ದರಿಂದ, ಬಿಜೆಪಿ ನಾಯಕರಿಗೆ ಇದನ್ನು ಸಹಿಸಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಳ್ಳೆಯ ಆಡಳಿತ ನಡೆಸುತ್ತಿದೆ ಎಂದರು.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿರುವುದು ಬಿಜೆಪಿ ಪಕ್ಷದ ನಿರ್ಧಾರವಾಗಿದೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ನನ್ನ ವೈಯಕ್ತಿಕ ಸ್ವಾಗತವಿದೆ. ಪಕ್ಷಕ್ಕೆ ಬರುವುದಕ್ಕೆ ಒಪ್ಪಿದರೆ ಹಿರಿಯ ನಾಯಕರು ತಿರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ಟೀಕೆ ಕೆಲಸವಾಗಿದೆ : ಬಿಜೆಪಿ ನಾಯಕರಿಗೆ ಪ್ರತಿಯೊಂದಕ್ಕೂ ಟೀಕಿಸುವುದೇ ಕೆಲಸವಾಗಿದೆ. ಬಿಜೆಪಿ ಅಧಿಕಾರದಲ್ಲಿ ಬಸವರಾಜ್ ಬೊಮ್ಮಯಿ ಸಿಎಂಯಾಗಿದ್ದ ಸಂದರ್ಭದಲ್ಲಿ 700 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಇಟ್ಟು ಹೋಗಿದ್ದಾರೆ. ಅಲ್ಲದೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಎರಡು ರೂ. ಪ್ರೋತ್ಸಾಹ ಧನ ನೀಡಿದ್ದರು. ಬಿಜೆಪಿಯವರು ಇಂತಹ ವಿಷಯಗಳಿಗೆ ಚರ್ಚೆ ಏಕೆ ಬರುವುದಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ಅವಧಿಯಲ್ಲಿ ಏರಿಕೆ ಮಾಡಿದ ಪ್ರೋತ್ಸಾಹಧನ ಬೊಮ್ಮಾಯಿ ಅವರ ಮನೆಗೆ ಹೋಗಿದಿಯೇ ?. ಸದ್ಯ ಹಾಲಿನ ದರ ಏರಿಕೆ ಮಾಡಿರುವ ಹಣ ರೈತರ ಖಾತೆಗೆ ಜಮೆಯಾಗಲಿದೆ. ರೈತರ ಬಗ್ಗೆ ಬಿಜೆಪಿಯವರಗೆ ಕಾಳಜಿ ಇಲ್ಲ. ಹೀಗಾಗಿ ಹಾಲಿನ ದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಕ್ರೋಶಗೊಂಡರು.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net