ಬಳ್ಳಾರಿಯಿಂದ ಶ್ರಮಿಕ ರೈಲಿನಲ್ಲಿ ಜಾರ್ಖಂಡದತ್ತ ಪ್ರಯಾಣ ಬೆಳೆಸಿದ 1550 ವಲಸಿಗರು, ಜಿಲ್ಲಾಡಳಿತ ಬೀಳ್ಕೊಡುಗೆ

220520 Ballari to Jharkhand Sharamika Special Train
Published on

ಬಳ್ಳಾರಿ: ನಗರದ ರೈಲ್ವೆ ನಿಲ್ದಾಣದಿಂದ ಜಾರ್ಖಂಡ್ ಮೂಲದ 1550 ವಲಸಿಗರು ಶುಕ್ರವಾರ ಶ್ರಮಿಕ ರೈಲಿನಲ್ಲಿ ತವರೂರಿಗೆ ತೆರಳಿದರು. ಡಿಸಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ, ಎಡಿಸಿ ಮಂಜುನಾಥ, ಎಎಸ್ಪಿ ಬಿ.ಎನ್.ಲಾವಣ್ಯ, ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಕಾಂಡೂ, ಎಸಿ ರಮೇಶ ಕೋನರೆಡ್ಡಿ, ಡಿವೈಎಸ್ಪಿ ರಾಮರಾವ್ ಇತರರು ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

ಪ್ರಯಾಣಿಕರಿಗೆ ಬಿಸ್ಕತ್ತು, ಬ್ರೆಡ್ ಪ್ಯಾಕ್, ಮೂರು ಲೀಟರ್ ನೀರಿನ ಬಾಟಲ್, ಆಹಾರ ಪೊಟ್ಟಣ, ಮಿರ್ಚಿ ಸೇರಿ ಇತರ ಆಹಾರ ಸಾಮಗ್ರಿ ಜಿಲ್ಲಾಡಳಿತದಿಂದ ನೀಡಲಾಯಿತು. ಅಲ್ಲದೆ ರೆಡ್ ಕ್ರಾಸ್ ಸಂಸ್ಥೆ ಮಾಸ್ಕ್ ವಿತರಿಸಿತು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಚಂದ್ರಶೇಖರ ಐಲಿ, ಅಲ್ತಾಫ್ ಸೇರಿ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ತೋರಣಗಲ್‌ನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಲಸಿಗರಿಗೆ ವೈದ್ಯಕೀಯ ತಪಾಸಣೆ ನಡೆಸಿ ಪ್ರಮಾಣಪತ್ರ ಹಾಗೂ ಟಿಕೆಟ್ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net