ಬಿಮ್ಸ್ ಸಹಾಯಕ ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯ

Published on

ಬಳ್ಳಾರಿ : ಇಲ್ಲಿನ ಬಿಮ್ಸ್‌ನ ಸಹಾಯಕ ಅಧಿಕಾರಿಯಿಂದ ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಅಪರೇಟರ್‌ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಅಧಿಕಾರಿ ವಿರುದ್ಧ ಮಹಿಳಾ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.

ಬಿಮ್ಸ್‌ನ ಆಡಳಿತ ಕಚೇರಿಯಲ್ಲಿ ಸಹಾಯಕ ಅಧಿಕಾರಿ ವಿ.ಕೆ.ವೆಂಕಟೇಶ್ ಎಂಬಾತನು 2019ರಲ್ಲಿ ಆಗಾಗ ಕಚೇರಿಯ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದ. ಬಿಮ್ಸ್‌ನಲ್ಲಿ ಇ-ಆಸ್ಪತ್ರೆ ಆರಂಭಿಸಿದಾಗ ತನ್ನೊಂದಿಗೆ ಕೆಟ್ಟದಾಗಿ ವರ್ತನೆ ಮಾಡಿ ಮೈ ಮುಟ್ಟಿ ಹಿಂಸೆ ನೀಡಿದ್ದಾನೆ. ಮಾರ್ಯದೆಗೆ ಹೆದರಿ ದೂರು ನೀಡಲು ಹಿಂದೇಟು ಹಾಕಿದೆ. 2024ರ ಡಿಸೆಂಬರ್ ತಿಂಗಳಲ್ಲಿ ನನ್ನ ಮದುವೆ ಕಾರಣದಿಂದ ರಜೆ ಮಾಡಲಾಗಿತ್ತು. ರಜೆ ಮುಗಿಸಿ ಕಚೇರಿಗೆ ಬಂದ ಬಳಿಕ ವೆಂಕೆಟೇಶ್ ಕೆಲಸವಿದೆ ಎಂಬುದಾಗಿ ಕಾರಿನಲ್ಲಿ ಕೂರಿಸಿಕೊಂಡು ನನ್ನ ಜತೆ ನೀನು ಇರುವ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಹೊರವಲಯದ ಲೇಔಟ್‌ನಲ್ಲಿ ಇಷ್ಟಕ್ಕೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದೇ ರೀತಿ ಹಲವು ಬಾರಿ ನನ್ನ ಮೇಲೆ ಲೈಂಗಿಕ ಎಸಗಿ ನನಗೆ ತಿಳಿಯದೆ ಹಾಗೇ ಪೋಟೋ ಹಾಗೂ ವಿಡಿಯೋಗಳನ್ನು ಮೊಬೈಲ್‌ನಲ್ಲಿ ತೆಗೆದುಕೊಂಡು ಯಾರಿಗೂ ಆದರೂ ಹೇಳಿದರೆ ನಿನ್ನ ಕುಟುಂಬದವರಿಗೆ ಹಾಕಿ ನಿನ್ನ ಮಾರ್ಯದೆ ತೆಗೆಯುವೆ ಎಂದು ಹೆದರಿಸಿದ್ದಾರೆ. ಕಚೇರಿಯ ಕೆಲಸ ಬಿಡುವೆ ತಿರ್ಮಾನಕ್ಕೆ ಬಂದ ವೇಳೆ ನನ್ನ ಗಂಡನಿಗೆ ಪೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಜೀವನ ಹಾಳು ಮಾಡಿದ್ದಾರೆ. ಆದ್ದರಿಂದ ವೆಂಕಟೇಶ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬುದಾಗಿ ಸಂತ್ರಸ್ಥೆ ದೂರಿನಲ್ಲಿ ತಿಳಿಸಿದ್ದಾರೆ.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net