ಏಳು ಅಭ್ಯರ್ಥಿಗಳು 13 ನಾಮಪತ್ರ ಸಲ್ಲಿಕೆ

Published on

ಬಳ್ಳಾರಿ : ಸಂಡೂರು ಉಪಚುನಾವಣೆಗೆ ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಪಕ್ಷೇತರಾಗಿ ಒಟ್ಟು ಏಳು ಅಭ್ಯರ್ಥಿಗಳು 13 ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು, ಕಾಂಗ್ರೆಸ್ ಅನ್ನಪೂರ್ಣ, ಕೆಜಿಪಿ ಎನ್. ಅಂಜಿನಪ್ಪ, ಪಕ್ಷೇತರ ಟಿ.ಎಂ. ಮಾರುತಿ, ಎನ್.ವೆಂಕಣ್ಣ, ಟಿ.ಎರ‌್ರಿಸ್ವಾಮಿ, ಬಂಗಾರಿ ಅನಿಲ್ ಕುಮಾರ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ತಲಾ ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಉಳಿದ ಅಭ್ಯರ್ಥಿಗಳು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಉಪಚುನಾವಣೆಯ ಚುನಾವಣಾಧಿಕಾರಿ ಎಚ್.ಡಿ. ರಾಜೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net