ಬಳ್ಳಾರಿ : ನಗರದ ಹತ್ತು ಆಯ್ದ ಪಾರ್ಕ್‌ಗಳಲ್ಲಿ ಧ್ಯಾನ ಕೇಂದ್ರಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗುವುದು ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು.
ಇಲ್ಲಿನ ಗಾಂಧಿನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂವಮೆಂಟ್ ಸಂಸ್ಥೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಸ್ಥೆಯ ಬೇಡಿಕೆಯಂತೆ ನಗರದ 10 ಆಯ್ದ ಪಾರ್ಕ್‌ಗಳಲ್ಲಿ ಧ್ಯಾನ ಕೇಂದ್ರ ನಿರ್ಮಿಸಲಾಗುವುದು. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಾನಸಿಕ ಖಿನ್ನತೆಯಿಂದ ಹೊರ ಬರಲು ಧ್ಯಾನ ಸಹಕಾರಿಯಾಗಿದೆ. ಖಿನ್ನತೆಗೆ ಸಿಲುಕಿದ್ದ ಎಷ್ಟೋ ಜನರಿಗೆ ಧ್ಯಾನದಿಂದ ಜೀವದಾನ ಆಗಿದೆ. ಭೌತಿಕ ಜಗತ್ತಿನ ಆಸೆ, ಆಕಾಂಕ್ಷೆಗಳಿಂದಾಗಿ ಜನರು ಒತ್ತಡಕ್ಕೆ ಸಿಲುಕಿದ್ದಾರೆ. ಅನಾರೋಗ್ಯಕರ ಸ್ಪರ್ಧೆ, ನಾ ಮುಂದೆ ಹೋಗಬೇಕೆಂಬ ಒತ್ತಡಕ್ಕೆ ಸಿಲುಕಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.