ಸೇವಾ ಭದ್ರತೆಗಾಗಿ ಮುಂದುವರಿದ ಧರಣಿ; 18 ದಿನವಾದರೂ ಸ್ಪಂದಿಸದ ಸರ್ಕಾರದ ವಿರುದ್ಧ ಅತಿಥಿ ಉಪನ್ಯಾಸಕರ ಆಕ್ರೋಶ

281221 Ballari Guest lecturers' union Protest
ಬಳ್ಳಾರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಎದುರು ಅತಿಥಿ ಉಪನ್ಯಾಸಕರ ಒಕ್ಕೂಟದ ಪದಾಧಿಕಾರಿಗಳು ಧರಣಿ ನಡೆಸಿದರು.
Published on

ಬಳ್ಳಾರಿ: ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರ ಒಕ್ಕೂಟದ ಪದಾಧಿಕಾರಿಗಳು ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಎದುರು ನಡೆಸುತ್ತಿರುವ ಧರಣಿ ಮಂಗಳವಾರ 18ನೇ ದಿನ ಪೂರೈಸಿತು.

ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ದುರುಗಪ್ಪ ಮಾತನಾಡಿ, ರಾಜ್ಯದ ಸರ್ಕಾರಿ ಪದವಿ ಕಾಲೇಜಿನಲ್ಲಿ 14,500 ಅತಿಥಿ ಉಪನ್ಯಾಸಕರು 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸೇವಾ ಭದ್ರತೆ ನೀಡಿಲ್ಲ. ಯಾವುದೇ ಸೌಲಭ್ಯಗಳು ಕೂಡ ಒದಗಿಸಿಲ್ಲ. ಇದರಿಂದ ಉಪನ್ಯಾಸಕರು ಬೀದಿಗೆ ಬಿಳುವಂತಾಗಿದೆ. ಅಲ್ಲದೆ, ಕಳೆದ 18 ದಿನಗಳಿಂದ ಯಾವುದೇ ತರಗತಿಗಳು ನಡೆದಿಲ್ಲ.ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮ ಬೇಡಿಕೆಗಳು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕಿ ಫರಿದಾ ಬೇಗಂ ಮಾತನಾಡಿ, ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡರೂ ಸಚಿವರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬೆಳಗಾವಿ ಅಧಿವೇಶನದಲ್ಲಿ ರಾಜಕಾರಣಿಗಳು ಹರಟೆ ಹೊಡೆದಿದ್ದಾರೆ ಹೊರತು ಸಾಮಾನ್ಯ ಕಷ್ಟ ಬಗೆಹರಿಸಿಲ್ಲ. ಬೇಡಿಕೆ ಈಡೇರುವವರೆಗೂಹೋರಾಟ ಮುಂದುವರಿಯಲಿದೆ ಎಂದರು. ಪದಾಧಿಕಾರಿಗಳಾದ ಎನ್.ಬಸವಾಜ, ತೌಸೀಫ್ ಖಾಜಿ, ಶರಣಪ್ಪ, ವಿಶ್ವನಾಥ್, ಜಿ.ಶ್ರೀವಾಣಿ, ಶಿಲ್ಪ ಸಜ್ಜನ್, ರೋಜಾ ಜೋಷಿ, ನೇತ್ರಾವತಿ, ಉಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net