ಸೇವೆ ಸಲ್ಲಿಸಿ ಸಾರ್ಥಕಗೊಳ್ಳಿ

Published on

ಬಳ್ಳಾರಿ, ಕನ್ನಡ ನಾಡು ನುಡಿಯ ಸೇವೆ ಸಲ್ಲಿಸಿ ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ಡಾ.ಜಿ.ಪುರುಷೋತ್ತಮ ಗೌಡ ಕರೆ ನೀಡಿದರು.

ಇಲ್ಲಿನ ಶ್ರೀಸತ್ಯಂ ಬಿ.ಇಡಿ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತೀರ್ಥ ಚಂದ್ರಶೇಖರ ಶಾಸ್ತ್ರಿ ಸ್ಮಾರಕ ದತ್ತಿ, ವಡ್ಡಿನ ಶೆಟ್ರ ಸಿದ್ದರಾಮಯ್ಯ ಮತ್ತು ಶ್ರೀಮತಿ ಮಹಾಂತಮ್ಮ ಸ್ಮಾರಕದತ್ತಿ ಡಿ.ಪಾಂಡುರಂಗ ಸ್ಮರಣಾರ್ಥ ಶನಿವಾರ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೆಲೆ, ಜಲ, ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ನಾಡಿನ ಒಳಿತಿಗಾಗಿ ಪರಿಶ್ರಮ ಪಡಬೇಕು. ಈಗಿನ ಯುವಕರಿಗೆ ಕನ್ನಡದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಬೇಕು ಎಂದರು.

ಕಾಲೇಜು ಪ್ರಾಚಾರ್ಯ ಡಾ.ಆಶ್ವರಾಮು ಮಾತನಾಡಿ, ಶ್ರೀಸತ್ಯಂ ಶಿಕ್ಷಣ ಸಂಸ್ಥೆಯು ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net