ರಾಜ್ಯದಲ್ಲಿ ಅಧಿಕಾರಿಗಳ‌ ಸರಣಿ ಆತ್ಮಹತ್ಯೆ

Published on

ಬಳ್ಳಾರಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರಿ ಅಧಿಕಾರಿಗಳ ಸರಣಿ ಆತ್ಮಹತ್ಯೆ ನಡೆಯುತ್ತಿದೆ ಎಂದು ವಿರೋಧ ‌ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದರು.

ಸಂಡೂರಿನ ಕಮತ್ತೂರು ಸೇರಿ ಹಲವು ಕಡೆ ಬುಧವಾರ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಸರ್ಕಾರಿ ನೌಕರರಿಗೆ ಸಾವಿನ ಭಾಗ್ಯ ಕೊಟ್ಟಿದೆ. ಲಂಚ ಕೊಡಿ, ಇಲ್ಲ ನೇಣು ಹಾಕಿಕೊಳ್ಳಿಯೆಂದು ಹೇಳಿದಂತಿದೆ. ಅಲ್ಲದೆ, ಸಂಡೂರಿನಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರಚಾರ ಮಾಡುತ್ತಿದ್ದಾರೆ. ಸರ್ಕಾರಿ ಯಂತ್ರದ ನೇರ ದುರುಪಯೋಗವಾಗುತ್ತಿದೆ. ಈ ಬಗ್ಗೆ ನ. 8 ರಂದು ಚುನಾವಣಾ ಆಯೋಗಕ್ಕೆ ಖುದ್ದು ದೂರು ಸಲ್ಲಿಸುವೆ. ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ ಯತ್ನಾಳ ಅವರ ಕುರಿತು ಕೇಳಲಾದ ಪ್ರಶ್ನೆಗೆ 'ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ನಡೆದಿದೆ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net