ಸೆಪ್ಟಂಬರ್ 10 ಸಿನಿಮಾ ಜು 2 ಬಿಡುಗಡೆ

Published on

ಬಳ್ಳಾರಿ ; ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ ಎಂಬ ಆಧಾರವಾಗಿ ನಿರ್ಮಿಸಿರುವ ’ ಸೆಪ್ಟಂಬರ್ 10 ’ ಸಿನಿಮಾ ಜು 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಓಂ ಪ್ರಕಾಶ್ ಹೇಳಿದರು.

ನಗರದ ಪತ್ರಿಕಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಿನಿಮಾವನ್ನು ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ಚಿತ್ರದ ಮೂಲಕ ದುರ್ಬಲ ಹಾಗೂ ಸಂಕುಚಿತ ಮನಸಿನವರಿಗೆ ಉತ್ತಮ ಸಂದೇಶ, ಮಾರ್ಗದರ್ಶನ ನೀಡುವ ಪ್ರಯತ್ನ ಈ ಚಿತ್ರದಲ್ಲಿದೆ. ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ ಹೀಗೆ ಎಲ್ಲ ತರಹದ ಮನರಂಜನಾತ್ಮಕ ಅಂಶಗಳು ಇವೆ. ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಕೂಡ ಸಿನಿಮಾಕ್ಕೆ ಜತೆಗೂಡಿಸಿದ್ದು ರಕ್ಷಣಾ ವೇದಿಕೆ ಸದಸ್ಯರೆಲ್ಲರಿಗೂ ಈ ಸಿನಿಮಾ ನೋಡಿ ಎಂಬುದಾಗಿ ತಿಳಿಸಿದ್ದಾರೆ ಎಂದರು.

ಡಾ.ವಿ.ನಾಗೇಂದ್ರಪ್ರಸಾದ್ ಸಂಗೀತ, ಜಿ.ಜಿ.ಕೃಷ್ಣ ದ ಛಾಯಾಗ್ರಹಣ, ಬಿಎ ಮಧು ಅವರ ಸಂಭಾಷಣೆ ಚಿತ್ರಕ್ಕಿದೆ. ಹಿರಿಯ ಕಲಾವಿದ ರಮೇಶಭಟ್, ನಟ ಶಶಿಕುಮಾರ, ಶ್ರೀನಿವಾಸ ಮೂರ್ತಿ, ರವೀಂದ್ರನಾಥ, ಶಿವಕುಮಾರ, ಗಣೇಶರಾವ್ ಕೇಸರಕರ್, ಸಿಹಿಕಹಿ ಚಂದ್ರು, ಮೀಸೆ ಅಂಜಿನಪ್ಪ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net