ಈಜು ಸ್ಪರ್ಧೆಗೆ ಆಯ್ಕೆ

Published on

ಬಳ್ಳಾರಿ ; ಈ ತಿಂಗಳ ಮಾ.17 ರಿಂದ 23 ರ ವರೆಗೆ ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ನಡೆಯುವ ಪ್ಯಾರಾ ಈಜು ವರ್ಲ್ಡ್ ಸೀರಿಸ್ ಈಜು ಸ್ಪರ್ಧೆಗೆ ಜಿಲ್ಲೆಯ ಗೋಪಿಚಂದ್ ಮತ್ತು ಸಾಯಿನಿಖಿಲ್ ಆಯ್ಕೆಯಾಗಿದ್ದಾರೆ.

ಗೋಪಿಚಂದ್ ಈಗಾಗಲೇ 2022 ರಲ್ಲಿ ಏಷಿಯನ್ ಪ್ಯಾರಾ ಸ್ವಿಮ್ಮಿಂಗ್‌ನಲ್ಲಿ 6 ಮತ್ತು 7 ಸ್ಥಾನ ಪಡೆದಿದ್ದರು. 2017 ರಿಂದ 2024 ರ ವರೆಗೆ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 36 ಚಿನ್ನ, 12 ಬೆಳ್ಳಿ ಪದಕ ಪಡೆದಿದ್ದಾರೆ.

ಸಾಯಿನಿಖಿಲ್ ಸಹ 2015 ರಿಂದ 2024 ರ ವರೆಗೆ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 16 ಚಿನ್ನ, 18 ಬೆಳ್ಳಿ ಮತ್ತು 2 ಕಂಚು ಪದಕ ಗಳಿಸಿದ್ದಾರೆ. ಪ್ಯಾರಾ ಕಮಿಟಿ ಇಂಡಿಯಾ ಈ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ತರಬೇತುದಾರರಾದ ರಜನಿಲಕ್ಕ ಮತ್ತು ಶರತ ಗಾಯಕ್‌ವಾಡ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net