ಎಸ್ಸಿ-ಎಸ್ಟಿ ಮೀಸಲಾತಿ ಹೋರಾಟಕ್ಕೆ ಬೆಂಬಲ

B Jayaram Advocate
ಬಿ.ಜಯರಾಮ್
Published on

ಬಳ್ಳಾರಿ: ಎಸ್ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸೆ.21ರಂದು ನಡೆವ ಧರಣಿಗೆ, ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಕೀಲರ ಮೀಸಲಾತಿ ಹೋರಾಟ ವೇದಿಕೆಯೂ ಬೆಂಬಲ ನೀಡಲಿದೆ ಎಂದು ವೇದಿಕೆ ಸದಸ್ಯ, ವಕೀಲ ಬಿ.ಜಯರಾಮ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮೀಸಲಾತಿ ಜಾರಿಗಾಗಿ ಧರಣಿ ಕುಳಿತು ಇನ್ನೂರಕ್ಕೂ ಹೆಚ್ಚು ದಿನ ಕಳೆದಿವೆ. ಆದರೆ, ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸದೆ ಕೇವಲ ಆಶ್ವಾಸನೆಗಳನ್ನು ನೀಡುತ್ತಿದೆ. ಶೀಘ್ರವೇ ಮೀಸಲಾತಿ ಘೋಷಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಚಿವ ಬಿ.ಶ್ರೀರಾಮುಲು, ಅಧಿಕಾರ ವಹಿಸಿಕೊಂಡ 24 ನಾಲ್ಕು ಗಂಟೆಯಲ್ಲಿ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿ 3 ವರ್ಷ ಕಳೆದರೂ ಅಂದಿದ್ದ ಕಾರ್ಯ ಸಾಧ್ಯವಾಗಿಸಿಲ್ಲ. ಹೀಗಾಗಿ ರಾಜ್ಯದ ವಕೀಲರು ಹಾಗೂ ಎಸ್‌ಸಿ, ಎಸ್‌ಟಿ ವಕೀಲರು ಧರಣಿಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಬಾದಾಮಿ ಶಿವಲಿಂಗ, ಕೆ. ಗವಿಸಿದ್ದಪ್ಪ, ಎಂ.ನಾಗರಾಜ ನಾಯಕ, ಸುರೇಶ್ ನಾಯಕ, ಮಲ್ಲೇಶ್ ನಾಯಕ, ಕೆ. ಗವಿಸಿದ್ದಪ್ಪ, ಕೆ.ಭಾಸ್ಕರ, ಟಿ.ರುದ್ರಮುನಿ, ಪೂಜಾರಿ ರಂಗನಾಥ, ಕೆ. ಕಾಳಿಂಗರಾಜ, ಬಿ.ಶೇಖಣ್ಣ, ಎಚ್. ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net