ಮೀಸಲಾತಿಗಾಗಿ 21ರಂದು ಪ್ರತಿಭಟನೆ

Meenahalli Tayanna Ballari
ಮೀನಳ್ಳಿ ತಾಯಣ್ಣ.
Published on

ಬಳ್ಳಾರಿ: ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಬೇಕು ಎಂದು ಆಗ್ರಹಿಸಿ ವಾಲ್ಮೀಕಿ ಶ್ರೀಗಳ ನಡೆಸುತ್ತಿರುವ ಅನಿರ್ಧಿಷ್ಟವಧಿ ಧರಣಿ ಬೆಂಬಲಿಸಿ, ಸೆ.21 ರಂದು ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಸ್ವಾಭಿಮಾನಿ ಎಸ್‌ಸಿ/ಎಸ್‌ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಸದಸ್ಯರಾದ ಮೀನಳ್ಳಿ ತಾಯಣ್ಣ ಮತ್ತು ಮುಂಡ್ರಿಗಿ ನಾಗರಾಜ ಹೇಳಿದರು.

ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸೆ.24 ರಂದು ಎಲ್ಲ ಶಾಸಕರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು. ಸರ್ಕಾರದಿಂದ ನಡೆಯುವ ವಾಲ್ಮೀಕಿ ಜಯಂತಿಯಲ್ಲಿ ಸಮುದಾಯದ ಮುಖಂಡರು ಭಾಗಿಯಾಗುವುದಿಲ್ಲ, ವಾಲ್ಮೀಕಿ ಶ್ರೀಗಳ ಮಾತಿನಂತೆ ಬೆಂಗಳೂರಿನ ಫ್ರೀಡಂ ಪಾರ್ಕ್‌ಲ್ಲಿ ವೈಯಕ್ತಿಕವಾಗಿ ಜಯಂತಿ ಆಚರಿಸಲಾಗುವುದು ಎಂದರು. ಮುಖಂಡರಾದ ದೊಡ್ಡ ಎರ‌್ರಿಸ್ವಾಮಿ, ಎ.ಮಾನಯ್ಯ, ವಿ.ಎಸ್.ಶಿವಶಂಕರ, ದುರುಗಪ್ಪ ತಳವಾರ್, ಕಗ್ಗಲ್ ವಿರೇಶಪ್ಪ, ರಾಮಾಂಜಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net