ಬಳ್ಳಾರಿ : ಇಲ್ಲಿನ ಅಲ್ಲಂ ಭವನದ ಗೋಕುಲಂ ಪಾರ್ಕ್‌ನಲ್ಲಿ ಜ.9 ರಿಂದ ಜ.19 ರವರೆಗೆ ಸಂಕ್ರಾಂತಿ ನಿಮಿತ್ತ ಮನೆಯ ತಿಂಡಿ ‘ಸಂಕ್ರಾಂತಿ ಹಬ್ಬದ ರುಚಿಕರ ಊಟ’ ಸಿಗಲಿದೆ.
ಸಂಕ್ರಾಂತಿ ಹಬ್ಬಕ್ಕಾಗಿ ವಿಶೇಷ ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳು ಹೊಂದಿರುವ ಸಂಪೂರ್ಣ ಭೋಜನ ಈ ವಿಶೇಷ ಕೂಟ ದೊರೆಯಲಿದೆೆ. ವಿವಿಧ ಸಿರಿಧಾನ್ಯಗಳ ರೊಟ್ಟಿ, ಪುಡಿಗಳು, ಶೇಂಗಾ ಮತ್ತು ಎಳ್ಳು ಹೋಳಿಗೆ, ತುಂಬಿದ ಗಾಯಿ, ಮೆಣಸಿನಕಾಯಿ ಪಲ್ಯ, ಉಂಡೆ ಕಡುಬು, ಕಾಳುಗಳನ್ನು ಊಣ ಬಡಿಸಲು ಗೋಕುಲ್ ಪಾರ್ಕ್ ಸಜ್ಜಾಗಿದೆ. ಸಕುಟುಂಬ ಸಪರಿವಾರ ಸಮೇತರಾಗಿ ಬಂದು ಸಂಕ್ರಾಂತಿ ಹಬ್ಬದ ಊಟವನ್ನು ಆಸ್ವಾದಿಸಿ, ಹಬ್ಬದ ಸವಿಯಿರಿ ಎಂದು ಮನವಿ ಮಾಡಿದೆ.
ಕಡಕ್ ಮೃದು ರಾಗಿ ರೊಟ್ಟಿಗಳು ಅನಿಯಮಿತ ಸೇವೆಗಾಗಿ ಒಬ್ಬರಿಗೆ 250 ರೂ. ಹಾಗೂ ಚಿಕ್ಕ ಮಕ್ಕಳಿಗೆ 150 ರೂ. ದರ ನಿಗದಿಪಡಿಸಲಾಗಿದೆ. ಗುಲ್ಲಡ್ಕಿ ಉಂಡೆ ಇಳ್ಕಲ್, ಕಾನ್ ಬ್ಲೌಸ್‌ಪೀಸ್ ಎಳ್ಳು, ಶೇಂಗಾ ಹೋಳಿಗೆ ಕಡಕ್ ಮತ್ತು ಮೃದು ರೊಟ್ಟಿ ಕಾನ್ ಬ್ಲೌಸ್ ಪೀಸಸ್ ಮಾರಾಟ ಮಾಡಲಾಗುವುದು. ಮಧ್ಯಾಹ್ನ 12 ರಿಂದ 3.45 ರವರೆಗೆ ಸೇವೆ ನೀಡಲಾಗುವುದು.