ಕಾಲುವೆಗೆ ಹಾರಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

Published on

ಬಳ್ಳಾರಿ: ಸಂಡೂರು ಪಟ್ಟಣದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಾರ್ವತಿ (37), ಶ್ರೇಯಾ (16) ಹಾಗೂ ಮಾನಸ (13)ಮೃತರು. ಸಿರಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದವರಾದ ಇವರು ಸಂಡೂರಿನಲ್ಲಿ ಕಿರಾಣಿ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಶ್ರೇಯಾ ಶವ ಶುಕ್ರವಾರ ತಿರುಮಲ ನಗರ ಕ್ಯಾಂಪ್‌ನ 15ನೇ ವಿತರಣಾ ಕಾಲುವೆಯಲ್ಲಿ, ಮಾನಸ ಮೃತದೇಹ ಶನಿವಾರ ತಾಳೂರು ರಸ್ತೆಯಲ್ಲಿರುವ 14ನೇ ವಿತರಣಾ ಕಾಲುವೆ ಬಳಿ ಹಾಗೂ ಪಾರ್ವತಿ ಶವ ಭಾನುವಾರ ಅಸುಂಡಿ ಬಳಿಯ 15ನೇ ವಿತರಣಾ ಕಾಲುವೆಯಲ್ಲಿ ಸಿಕ್ಕಿದೆ. ಪಾರ್ವತಿ ಅವರ ಪತಿ ಶಂಕರ್‌ಗೆ ಮೃತದೇಹ ಹಸ್ತಾಂತರಿಸಲಾತು. ಪಿ.ಡಿ.ಹಳ್ಳಿ ಹಾಗೂ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net