ಸನಾತನ ಧರ್ಮ ಜಗತ್ತಿಗೆ ಮಾದರಿ

Published on

ಬಳ್ಳಾರಿ : ಪಾಶ್ಚಾತ್ಯ ಸಂಸ್ಕ್ರತಿ ಅಳವಡಿಕೆಯಿಂದ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದೇವೆ, ಭಾರತ ದೇಶದ ಸನಾತನ ಧರ್ಮ ಜಗತ್ತಿಗೆ ಮಾದರಿಯಾಗಿದೆ ಎಂದು ಶ್ರೀಸುಧೀರಾನಂದಗಿರಿ ಸ್ವಾಮೀಜಿ ಹೇಳಿದರು.

ಕುಡಿತಿನಿ ಪಟ್ಟಣದ ಪಾಂಡುರಂಗ ರುಕ್ಮಿಣಿ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಏಳನೇ ವರ್ಷದ ಆಧ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಲೋಭ ಗುಣ ಇದ್ದ ಅಸುರರು ಕೆಟ್ಟ ಕೆಲಸ ಬಿಟ್ಟು ಭಗವಂತನನ್ನು ನಂಬಿ ಸನ್ಮಾರ್ಗದಲ್ಲಿ ನಡೆದು ಮುಕ್ತಿ ಪಡೆಯಬೇಕು. ಕಾಮ ಕ್ರೋಧ ಮದ ಮತ್ಸರ ಇವು ಮನುಷ್ಯ ಜೀವನದ ಕೆಟ್ಟ ಶತ್ರುಗಳು ಅವುಗಳನ್ನು ತ್ಯಜಿಸಿ ಭಗವಂತನ ನಾಮಸ್ಮರಣೆ ಮಾಡಿ ನೆಮ್ಮದಿ ಜೀವನ ಕಾಣಬೇಕು ದುಶ್ಚಟಗಳಿಂದ ದೂರವಿದ್ದು ಕುಟುಂಬದೊಂದಿಗೆ ನೆರೆ ಹೊರೆಯವರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವ ಮೂಲಕ ಸಜ್ಜನರಾಗಿ ಬಾಳಿ ಎಂದು ಭಕ್ತರಿಗೆ ಆಶೀರ್ವಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net