ಸಂವಿ‘ಾನ ದಿನಾಚರಣೆ

Published on

ಬಳ್ಳಾರಿ:ನಗರದ ಮಹರ್ಷಿ ವಾಲ್ಮೀಕಿ ‘ವನದಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನ.೨೬ ರಂದು ಬೆಳಗ್ಗೆ ೧೦.೩೦ ಗಂಟೆಗೆ ಸಂವಿ‘ಾನ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನ.೨೬ ರಂದು ಬೆಳಗ್ಗೆ ೯.೩೦ ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಲಾಗುವುದು.

ಜಿಲ್ಲೆಯ ಎಲ್ಲ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಂವಿ‘ಾನದ ಆಶಯಗಳ ಕುರಿತಂತೆ ತಜ್ಞರಿಂದ ವಿಶೇಷ ಉಪನ್ಯಾಸ ಮತ್ತು ಚಿತ್ರಕಲಾ ಪ್ರದರ್ಶನಾ, ಸಂವಿ‘ಾನ ಪೀಠಿಕೆ ವಾಚನ ಮಾಡಿ, ಸಹಿ ಅಭಿಯಾನ ಆಯೋಜಿಸಲಾಗಿದೆ.

ಬಳ್ಳಾರಿ ನಗರದ ಡಾ.ರಾಜ್‌ಕುಮಾರ್ ಉದ್ಯಾನವನದಲ್ಲಿ ಕನ್ನಡ ಮತ್ತು ಆಂಗ್ಲ ಮಾ‘್ಯಮದಲ್ಲಿ ಸರಕಾರದಿಂದ ಅನುಮೋದಿತ (ಅಂದಾಜು ೧೦ಘಿ೧೨ ಅಡಿ ಆಳತೆಯ) ‘ಾರತ ಸಂವಿ‘ಾನ ಪೀಠಿಕೆ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸಿ ೨೬ನೇ ಜನವರಿ ೨೦೨೫ರಂದು ಉದ್ಘಾಟಿಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ‘ಾಗವಹಿಸುವ ಸಾರ್ವಜನಿಕರಿಗೆ ನ್ಯಾಯಮೂರ್ತಿ ಡಾ.ನಾಗಮೋಹನ ದಾಸ್ ಅವರು ರಚಿಸಿರುವ ಸಂವಿ‘ಾನ ಓದು ಪುಸ್ತಕಗಳ ವಿತರಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳು, ಸಂಘ ಸಂಸ್ಥೆಗಳ ಪದಾಕಾರಿಗಳು, ಮುಖಂಡರು ಮತ್ತು ಸಾರ್ವಜನಿಕರು ಹಾಗೂ ಅಕಾರಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ‘ಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net