

ಬಳ್ಳಾರಿ: ವಿಧಾನಸಭೆ ಚುನಾವಣೆ ಹಿನ್ನೆಲೆ ಎಫ್‌ಎಸ್‌ಟಿ ತಂಡ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತಪಾಸಣೆ ವೇಳೆ ಸೋಮವಾರ ಸೂಕ್ತ ದಾಖಲೆಯಿಲ್ಲದ 64.81 ಲಕ್ಷ ರೂ. ನಗದು ಮತ್ತು ಅನಧಿಕೃತವಾಗಿ ಸಾಗಿಸುತ್ತಿದ್ದ 60,513 ರೂ. ಮೌಲ್ಯದ 137.08 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್ ತಂಡವು ತಪಾಸಣೆ ವೇಳೆ 61,70,310 ರೂ. ಮೊತ್ತದ ನಗದು ಹಾಗೂ ಪೊಲೀಸ್ ಇಲಾಖೆ ತಪಾಸಣೆ ವೇಳೆ 3,10,800 ರೂ. ನಗದು ಸೇರಿದಂತೆ ಒಟ್ಟು 64,81,110 ರೂ. ಮೊತ್ತದ ನಗದು ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದ 20,117 ರೂ. ಮೌಲ್ಯದ 46.48 ಲೀಟರ್ ಮದ್ಯ ಹಾಗೂ ಪೊಲೀಸ್ ಇಲಾಖೆಯಿಂದ 40,396 ರೂ. ಮೌಲ್ಯದ 90.60 ಲೀಟರ್ ಮದ್ಯ ಸೇರಿದಂತೆ ಒಟ್ಟು 60,513 ರೂ. ಮೌಲ್ಯದ 137.08 ಲೀಟರ್ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.