ಈಗಿನ ಪೀಳಿಗೆಗೆ ರೊಬೊಟಿಕ್ ಕ್ಲಾಸ್‌ಗಳು ಅವಶ್ಯ

Published on

ಬಳ್ಳಾರಿ : ಈಗಿನ ಪೀಳಿಗೆಗೆ ರೊಬೊಟಿಕ್ ತರಗತಿಗಳು ಅವಶ್ಯಕವಾಗಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರು ಬಸವರಾಜ್ ಹೇಳಿದರು.

ಇಲ್ಲಿನ ಎಸ್‌ಕೆ ಮೋದಿ ನ್ಯಾಷನಲ್ ಶಾಲೆಯಲ್ಲಿ ಸೋಮವಾರ ನಡೆದ ಸಿಬಿಎಸ್‌ಇ ಅಫಿಲಿಯೇಶನ್ ಸಂಖ್ಯೆಯ ಅನಾವರಣ ಹಾಗೂ ರೊಬೊಟಿಕ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು. ವೀವಿ ಸಂಘದ ಶಾಲೆಗಳಲ್ಲಿ ಪ್ರಥಮ ಬಾರಿಗೆ ಎಸ್.ಕೆ. ಮೋದಿ ನ್ಯಾಷನಲ್ ಶಾಲೆಯಲ್ಲಿ ರೊಬೊಟಿಕ್ ಲ್ಯಾಬ್ ಪ್ರಾರಂವಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾಕಾರಿ ಪ್ರಶಾಂತ್ ಕುಮಾರ ಮಿಶ್ರಾ ಮಾತನಾಡಿ, 21ನೇ ಶತಮಾನದಲ್ಲಿ ರೊಬೊಟಿಕ್ಸ್ ಕ್ಷೇತ್ರ ಮತ್ತು ರೊಬೊಟ್‌ಗಳ ಸಂಭಾವ್ಯ ಉಪಯೋಗಗಳು ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಪ್ರಮುಖರಾದ ವೀವಿ ಸಂಘದ ಸಹ ಕಾರ್ಯದರ್ಶಿ ಯಾಳ್ಪಿ ಮೇಟಿ ಪೊಂಪನಗೌಡ, ಖಜಾಂಚಿ ಬೈಲುವದ್ದಿಗೇರಿ ಎರ್ರಿಸ್ವಾಮಿ, ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಕೋರಿ ವಿರುಪಾಕ್ಷಪ್ಪ, ಎಲ್.ಟಿ.ಶೇಖರ್, ನರೇಂದ್ರ ಬಾಬು, ಶರಣ ಬಸವನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net