ಈಗಲೇ ಶಾಲೆಗಳ ಆರಂಭ ಬೇಡ, ಅಪರ ಜಿಲ್ಲಾಧಿಕಾರಿಗೆ ಭಾರತೀಯ ಪಾಲಕರ ಸಂಘ ಮನವಿ

Ballari Indian Parents Association Appeal
ಬಳ್ಳಾರಿಯಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥಗೆ ಭಾರತೀಯ ಪಾಲಕರ ಸಂಘ ಮನವಿ ಸಲ್ಲಿಸಿತು.
Published on

ಬಳ್ಳಾರಿ: ಕರೊನಾ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಬಳಿಕವೇ ಶಾಲೆಗಳನ್ನು ಆರಂಭಿಸಬೇಕೆಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಪಾಲಕರ ಸಂಘದಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿ ಮಂಜುನಾಥಗೆ ಮನವಿ ಸಲ್ಲಿಸಲಾಯಿತು.

ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸಿದರೆ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆಗಳಿವೆ. ಸೋಂಕು ತಗ್ಗಿದ ಬಳಿಕ ಶಾಲೆಯ ವಾರ್ಷಿಕ ಅವಧಿ ಹಾಗೂ ಪಠ್ಯ ಪ್ರಮಾಣ ಕಡಿಮೆ ಮಾಡಿ ಶಾಲೆಗಳನ್ನು ಆರಂಭಿಸುವುದು ಸೂಕ್ತ. 10ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ಬೇಡ. ಆನ್‌ಲೈನ್ ಶಿಕ್ಷಣದಿಂದ ಮಧ್ಯಮ ವರ್ಗ ಹಾಗೂ ಬಡ ಮಕ್ಕಳಿಗೆ ಸಮಸ್ಯೆಯಾಗಲಿದೆ. ಶಾಲೆಗಳಲ್ಲಿ ಈಗಾಗಲೇ ಶುಲ್ಕ ಪಾವತಿಸಲು ಒತ್ತಾಯ ಮಾಡಲಾಗುತ್ತಿದೆ. ಶಾಲೆಗಳು ಆರಂಭವಾದ ಬಳಿಕವೇ ಶುಲ್ಕ ಸಂಗ್ರಹಿಸಬೇಕು. ಪ್ರಸಕ್ತ ವರ್ಷ ಹೆಚ್ಚು ಶುಲ್ಕ ಪಡೆಯಬಾರದು. ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ಆಯೋಜಿಸಬೇಕೆಂದು ಒತ್ತಾಯಿಸಲಾಯಿತು.

ಸಂಘದ ಸಂಚಾಲಕ ಪ್ರಭುದೇವ ಕಪ್ಪಗಲ್ಲು, ಸಹ ಸಂಚಾಲಕ ಕೆ.ವೀರಭದ್ರಪ್ಪ, ಪಾಲಕರಾದ ವೆಂಕಟೇಶ ಬಡಿಗೇರ, ಕೆ.ಆರ್.ಮಲ್ಲೇಶ ಕುಮಾರ್, ಪ್ರವೀಣ್ ನಾಯಕ್, ವಿಜಯ ಕುಮಾರ್, ಪಾಂಡುರಂಗ, ಗೋವರ್ಧನ, ಸಾದಿಕ್, ರವಿ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net