ಬಳ್ಳಾರಿ ; ಕಾರ್ಮಿಕ-ವಿರೋಧಿ ಬಂಡವಾಳಶಾಹಿ ಪರ ನಾಲ್ಕು ಲೇಬರ್ ಕೋಡ್‌ಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಇಲ್ಲಿನ ಡಿಸಿ ಕಚೇರಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿದರು.
ಎಐಯುಟಿಯುಸಿಯ ಎ.ದೇವದಾಸ್‌ಮಾತನಾಡಿ, ಕೇಂದ್ರ ಸರ್ಕಾರದ ವ್ಯಾಪಾರ ಸುಲಭ ಮಾಡುವ ಹೆಸರಿನಲ್ಲಿ ದುಡಿಯುವ ಜನರ ಮೇಲೆ ಗುಲಾಮಗಿರಿಯ ಷರತ್ತುಗಳನ್ನು ಹೇರುತ್ತಿದೆ. ಅವಿರತ ತ್ಯಾಗ ಬಲಿದಾನಗಳಿಂದ ಗಳಿಸಿದ 29 ಕಾರ್ಮಿಕ ಕಾನೂನುಗಳನ್ನು ಕಿತ್ತು ಹಾಕಿ ಕಾರ್ಮಿಕ-ವಿರೋಧಿ 4 ಲೇಬರ್ ಕೋಡ್‌ಗಳನ್ನು ಜಾರಿಗೊಳಿಸಲು ಸಕ್ರಿಯವಾಗಿದೆ ಎಂದು ತಿಳಿಸಿದರು.
ಲೇಬರ್ ಕೋಡ್‌ಗಳು ಕಾರ್ಮಿಕರ ಬಹುತೇಕ ಚಾಲ್ತಿಯಲ್ಲಿರುವ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಮೂಲಭೂತ ಹಕ್ಕುಗಳು ಹಾಗೂ ಯೂನಿಯನ್ ಮಾಡುವ ಹಕ್ಕು, ಮನ್ನಣೆ, ಸಾಮೂಹಿಕ ಚೌಕಾಸಿ, ಅಂದೋಲನಗಳು ಮತ್ತು ಮುಷ್ಕರದ ಹಕ್ಕು ಸೇರಿದಂತೆ ಯಾವುದೇ ರೀತಿಯ ಸಾಮೂಹಿಕ ಪ್ರತಿಭಟನೆಯ ಹಕ್ಕುಗಳನ್ನು ಲೇಬರ್ ಕೋಡ್‌ಗಳು ಕಸಿದುಕೊಳ್ಳುತ್ತವೆ ಎಂದು ಆರೋಪಿಸಿದರು.
ಪ್ರಸ್ತುತ ಕೇಂದ್ರವು ಅತ್ಯಂತ ವೇಗವಾಗಿ ಈ ನೀತಿಗಳನ್ನು ಅನುಷ್ಠಾನಗೊಳಿಸುತ್ತಿರುವುದು ಅತ್ಯಂತ ಕಾರ್ಮಿಕ ಹಾಗೂ ಜನ ವಿರೋದಿ ಕ್ರಮವಾಗಿದೆ ಎಂದು ಅಕ್ರೋಶವ್ಯಕ್ತಪಡಿಸಿದರು.