ಬಾಡಿಗೆ ಕಾರು ಮಾರಾಟ ಪ್ರಕರಣ, 44 ಕಾರು ವಶ

Published on

ಬಳ್ಳಾರಿ : ಜಿಲ್ಲೆಯ ನೂರರು ಕಾರುಗಳು ಬಾಡಿಗೆ ಪಡೆದು ಬೇರೆಡೆ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 44 ಕಾರುಗಳು ಪತ್ತೆಹಚ್ಚಿ, ಸೋಮವಾರ ಮಾಲೀಕರಿಗೆ ಒಪ್ಪಿಸಲಾಗಿದೆ.

ಕೆಲ ದಿನಗಳ ಹಿಂದೆ ನಗರದ ನಾನಾ ಹಾಗೂ ಆಂಧ್ರಪ್ರದೇಶ ಪೊಲೀಸ್ ಠಾಣೆಯಲ್ಲಿ ನೂರರು ಕಾರುಗಳು ವಂಚನೆ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು 104 ಕಾರುಗಳಲ್ಲಿ 44 ಕಾರುಗಳನ್ನು ಪತ್ತೆ ಹಚ್ಚಿದ್ದಾರೆ. ಆದರೆ, ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ಘಟನೆ : ಕಾರುಗಳನ್ನು ಬಾಡಿಗೆಗೆಂದು ಪಡೆದುಕೊಂಡು ಬೇರೆ ಊರುಗಳಲ್ಲಿ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಬಸವನ ಕುಂಟೆಯ ಜಾಹಿದ್ ಬಾಷಾ ಎಂಬಾತನ ವಿರುದ್ಧ ಸೈಯ್ಯದ್ ಸದ್ರು ಎಂಬುವವರು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಗರದ 50-60 ಜನರಿಂದ ಕಾರನ್ನು ಬಾಡಿಗೆಗೆಂದು ಕೊಂಡೊಯ್ದಿರುವ ಜಾಹಿದ್ ಅದನ್ನು ಸಿಂಧನೂರು, ರಾಯಚೂರುಗಳಲ್ಲಿ ಅಡಮಾನ, ಮಾರಾಟ ಮಾಡಿದ್ದಾನೆ ಎಂದು ಆರೋಪಿಸಿ ದೂರಿನಲ್ಲಿ ಉಲ್ಲೇಖಿಸಿದ್ದರು.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net