

ಬಳ್ಳಾರಿ: ಕಾಳ ಸಂತೆಯಲ್ಲಿ ರೆಮ್‌ಡೆಸಿವಿರ್ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಸೈದುಲು ಅದಾವತ್ ತಿಳಿಸಿದ್ದಾರೆ.
ರೆಮ್‌ಡೆಸಿವಿರ್ ಅಕ್ರಮ ಮಾರಾಟ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರು ಡೋಸ್ ರೆಮ್‌ಡೆಸಿವಿರ್ ಲಸಿಕೆ ವಶಪಡಿಸಿಕೊಳ್ಳಲಾಗಿದೆ. ಕಿಶೋರ್ ಕುಮಾರ್ ಎನ್ನುವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ದಾಳಿ ವೇಳೆ ಒಂದು ಡೋಸ್ ಲಸಿಕೆಗೆ 25 ರಿಂದ 30 ಸಾವಿರ ರೂ.ದಂತೆ ಮಾರಾಟ ಮಾಡುತ್ತಿದ್ದರು. ಆರು ಡೋಸ್ ಲಸಿಕೆಗೆ ಒಂದೂವರೆ ಲಕ್ಷ ರೂ.ವರೆಗೆ ಪಡೆದು ಲಸಿಕೆ ನೀಡುತ್ತಿದ್ದರು. ಬಂಧಿತ ವ್ಯಕ್ತಿಯ ಹಿಂದೆ ಹಲವರು ಇರುವ ಶಂಕೆ ಇದ್ದು, ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ ಎಂದರು.