ಬಳ್ಳಾರಿ : ಇಲ್ಲಿನ ಸುಧಾಕ್ರಾಸ್ ರಸ್ತೆಯಲ್ಲಿ ಬೈಕ್ ಚಲಾಯಿಸುವ ವೇಳೆ ಹಿಂಬದಿಯ ಸವಾರನೊಬ್ಬ ಮದ್ಯ ಸೇವಿಸಿದ ಯುವಕನಿಗೆ ಪೊಲೀಸರು ನೋಟಿಸ್ ನೀಡಿ ಮೂರು ಸಾವಿರ ರೂ. ದಂಡ ವಿಧಿಸಿದ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ಕರ್ಚೇಡ ಗ್ರಾಮದ ನಿವಾಸಿ ಕೇಶವ ಎಂಬ ಯುವಕ ಬೈಕ್ ಚಲಾಯಿಸುವ ವೇಳೆ ಹಿಂಬದಿಯಲ್ಲಿ ಮದ್ಯ ಸೇವಿಸಿ ರಸ್ತೆಯ ಬದಿ ಬಾಟಲಿ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಯಾಗಿತ್ತು. ಟ್ರಾಫಿಕ್ ಪೊಲೀಸ್ ಠಾಣೆ ಪೊಲೀಸರು ಯುವಕನನ್ನು ಬಂಧಿಸಿ ದಂಡ ವಿಧಿಸಿ ನೋಟಿಸ್ ನೀಡಿದ್ದಾರೆ.
2025ರ ಹೊಸ ವರ್ಷ ಆಚರಣೆ ಹಿನ್ನೆಲೆ ಬೈಕ್ ಹಿಂಬದಿ ಮದ್ಯ ಸೇವಿಸಿದ್ದೆ ಎಂಬುದಾಗಿ ಯುವಕ ಪೊಲೀಸರ ಬಳಿ ತಿಳಿಸಿದ್ದಾನೆ. ಆದರೆ, ಈಗ ಹಳೆಯ ವಿಡಿಯೋ ಸದ್ಯ ವೈರಲ್ ಯಾಗಿದೆ.