ಫೆ.24ರಿಂದ ಬಳ್ಳಾರಿಯಲ್ಲಿ ರಂಗ ರಥೋತ್ಸವ : ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಪ್ರಭುದೇವ ಕಪ್ಪಗಲ್ಲು ಮಾಹಿತಿ

22022021 Bellary Prabhu Deva kappagallu
Published on

ಬಳ್ಳಾರಿ: ರಂಗ ಕಲಾನಿಧಿ ಸಿಡಗಿನಮೊಳ ವೈ.ಎಂ.ಚಂದ್ರಯ್ಯರ ಜನ್ಮಶತಮಾನೋತ್ಸವ ನಿಮಿತ್ತ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಫೆ.24 ರಿಂದ ಮಾ.2ರವರೆಗೆ ರಂಗ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಭಿನಯ, ಗಮಕ, ವ್ಯಾಖ್ಯಾನ, ಪ್ರವಚನಗಳಿಂದ ನಾಡಿಗೆ ಹೆಮ್ಮೆ ತಂದ ಶ್ರೇಷ್ಠ ಕಲಾವಿದ, ಕ್ರಿಯಾಶೀಲ ಸಂಘಟಕ ಸಿಡಗಿನಮೊಳ ವೈ.ಎಂ.ಚಂದ್ರಯ್ಯ. ಅವರು ನಿರ್ಮಿಸಿ ಕೊಟ್ಟ ಕಲಾ ಮಾರ್ಗ ಮುಂದುವರಿಸುವ ಸಲುವಾಗಿ ಅವರ ಶತಮಾನೋತ್ಸವ ನಿಮಿತ್ತ ರಂಗಮಂದಿರದಲ್ಲಿ ಆರು ದಿನ ಶಿವಮೊಗ್ಗ, ಧಾರವಾಡ, ಕಲಬುರಗಿ, ರಂಗಾಯಣಗಳ ವಿಶೇಷ ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಬೆಳಗಲ್ಲು ವೀರಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾಹಿತಿ ಮೃತ್ಯುಂಜಯ ರುಮಾಲೆ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಹಾಗೂ ಜೋಳದ ರಾಶಿ ದೊಡ್ಡನಗೌಡ ಪ್ರತಿಷ್ಠಾನದ ಗೌರವಾಧ್ಯಕ್ಷ ಬಿ.ಸಿದ್ದನಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಂಚಾಲಕ ಅಡವಿಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net