

ಬಳ್ಳಾರಿ : ಕಳೆದರೆಡು ದಿನಗಳಲ್ಲಿ ರಾಮುಲು ಹಾಗೂ ರೆಡ್ಡಿ ನಡುವಿನ ಶೀತಲಸಮರ ಬಿಜೆಪಿ ಹೈಕ್‌ಮಾಂಡ್‌ಗೆ ತಲುಪಿದ್ದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದೂರವಾಣಿ ಕರೆ ಮೂಲಕ ಮಾಜಿ ಸಚಿವ ಶ್ರೀರಾಮುಲು ಅವರನ್ನು ದೆಹಲಿಗೆ ಆಹ್ವಾನಿಸಿದ್ದಾರೆ.
ಹೈಕ್‌ಮಾಂಡ್‌ನಿಂದ ಸ್ಪಂದನೆ ಬಳಿಕ ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತನಾಡಿ, ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಬಿಜೆಪಿಗೆ ಸಾಧ್ಯವಾದಷ್ಟು ಅಳಿಲು ಸೇವೆ ಸಲ್ಲಿಸಿರುವೆ. ಸದಾ ಹಿಂದುಳಿದ ಪರವಾಗಿರುವುದರಿಂದ ಕೇಂದ್ರ ಹಿರಿಯನಾಯಕರು ಗುರುತಿಸಿದ್ದಾರೆ. ರಾಜ್ಯದ ಕೋರ್ ಕಮಿಟಿ ಸಭೆಯಲ್ಲಿ ರಾಧಮೋಹನ್ ಆಗರವಾಲ್ ನನ್ನ ವಿರುದ್ದ ಮಾಡಿರುವ ಆರೋಪಗಳನ್ನು ವಾಪಾಸ್ ಪಡೆಯಲಿದ್ದಾರೆ. ಅಲ್ಲದೆ, ಅಪಮಾನ ಹಾಗೂ ನೋವಿನ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತಾ ಷಾ ಅವರಿಗೆ ವಿಷಯವನ್ನು ತಿಳಿಸಲಾಗಿದೆ. ದೆಹಲಿಗೆ ಬನ್ನಿ ವಿವರಣೆಯಾಗಿ ಚರ್ಚಿಸೋಣ ಎಂಬುದಾಗಿ ನಡ್ಡಾ ದೂರವಾಣಿ ಕರೆಯಲ್ಲಿ ತಿಳಿಸಿದ್ದಾರೆ ಎಂದು ರಾಮುಲು ಹೇಳಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು ಕೂಡ ನನ್ನ ಮೇಲೆ ವಿಶ್ವಾಸಹೊಂದಿದ್ದು ಪಕ್ಷ ಬಿಡುವ ಯೋಚನೆ ಮಾಡಬೇಡಿ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಮೇಲಿನ ಪ್ರೀತಿಯಿಂದ ಬಹಿರಂಗವಾಗಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ಯಾವುದೆ ಕಾರಣಕ್ಕೂ ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಾಕ್ಸ್ : ಇಲ್ಲಿನ ಹವಂಬಾವಿಯಲ್ಲಿ ರಾಮುಲು ಹಾಗೂ ರೆಡ್ಡಿಯ ಮನೆಗಳು ನೂರು ಅಡಿಯ ಅಂತರದಲ್ಲಿವೆ. ಎರಡು ಮನೆಯ ಕುಟಂಬಸ್ಥರು ಮನೆಗಳಿಗೆ ಸಂಪರ್ಕಿಸಲು ಕೌಂಪಂಡ್ ಬಳಿ ಬಾಗಿಲು ತೆರೆಯಲಾಗಿತ್ತು. ಆದರೆ, ಇಬ್ಬರ ಮನಸ್ತಾಪ ಬೆನ್ನಲೇ ರಾತ್ರೋರಾತ್ರಿ ತಡೆಗೋಡೆ ನಿರ್ಮಿಸಿ ರಾಮುಲು ಬಾಗಿಲು ಮುಚ್ಚಿದ್ದಾರೆ. ಇದರಿಂದ ಇಬ್ಬರ ಮನಸ್ತಾಪ ಕೇವಲ ರಾಜಕೀಯ ಅಲ್ಲ, ಕುಟುಂಬದಲ್ಲಿಯೂ ಬಿರುಕು ಮೂಡಿರುವುದು ಸ್ಪಷ್ಟವಾಗಿದೆ.