ಗುಣಮಟ್ಟದ ಅಭರಣಕ್ಕೆ ರಾಜಮಹಲ್ ಫ್ಯಾನ್ಸಿ ಜುವೆಲ್ಸರ್ಸ್‌

13 yerriswamy 02
Published on

ಬಳ್ಳಾರಿ : ಇಲ್ಲಿನ ಬೆಂಗಳೂರು ರಸ್ತೆಯಲ್ಲಿನ ರಾಜ್‌ಮಹಲ್ ಫ್ಯಾನ್ಸಿ ಜುವೆಲ್ಸರ್ಸ್‌ ಶಾಪ್ ಗ್ರಾಹಕರ ಪ್ರೀತಿ ವಿಶ್ವಾಸದ ದ್ಯೋತಕವಾಗಿದೆ. 1958 ರಲ್ಲಿ ಆರಂಭವಾದ ಮಳಿಗೆಯು ಮೂರು ಅಂತಸ್ತಿನ ಮಹಡಿ ಹೊಂದಿದೆ. ಈಗಾಗಲೇ ನಾಲ್ಕನೇ ತಲೆಮಾರಿನ ಮಳಿಗೆ ಎಂಬ ಹೆಸರು ಪಡೆದಿದೆ.

ಹಣ ಸಂಪಾದನೆ ಪರಮಗುರಿ ಎನ್ನದೆ ಗ್ರಾಹಕರ ಹಿತಚಿಂತನೆ, ಮನೋಭಿಲಾಷೆಗೆ ತಕ್ಕಂತೆ ಗುಣಮಟ್ಟದ ಬಂಗಾರವನ್ನು ಕೈಗೆಟುಕುವ ದರಕ್ಕೆ ನೀಡಬೇಕು ಎಂಬದು ಮಾಲೀಕರ ಸದುದ್ದೇಶವಾಗಿದೆ. ಹಬ್ಬ, ಜಾತ್ರೆ, ಮದುವೆ, ಶುಭ ಸಮಾರಂಭಕ್ಕೆ ಬಂಗಾರ ಖರೀದಿಗೆ ಮುಗಿಬೀಳುವ ಅಭರಣ ಪ್ರಿಯರಿಗೆ ಇವರೆಂದೂ ನಿರಾಸೆಗೊಳಿಸಲ್ಲ. ಪ್ರತಿ ತಿಂಗಳು ಗೋಲ್ಡ್ ಸೇವಿಂಗ್ಸ್ ಸ್ಕೀಮ್ಸ್ ಮೂಲಕ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಅಭರಣಗಳನ್ನು ಮಾರಾಟ ಮಾಡುತ್ತಾರೆ. ಮಹಿಳೆಯರು ಹಾಗೂ ಪುರುಷರು ಧರಿಸುವ ಬ್ಯಾಂಗಲ್ಸ್, ಹೇರ್ ರಿಂಗ್ಸ್, ನೆಕ್‌ಲಿಸ್, ಬ್ರಾಚ್ಸ್, ಮಂಗಾ ಟಿಕ್, ಮಂಗಳ ಸೂತ್ರ, ರಿಂಗ್, ಕಾಮ ಬ್ರಾೃಂಡ್, ಬಾಜು ಬ್ಯಾಂಡ್, ಚೈನ್, ಮೂಗಿನ ಪಿನ್ಸ್, ಫಿಂಗ್‌ರ್ ರಿಂಗ್ಸ್ , ಜುವೆಲರ್ ಸೆಟ್ಸ್ , ಚೈನ್, ಬ್ರಾಸ್ಲೆಟ್, ಖಡಗ, ಡಾಲರ್ ಸೇರಿದಂತೆ ವಿವಿಧ ಬಗೆಯ ಸರ್ಕಾರದ ಎಚ್‌ಯುಐಡಿ ಮಾರ್ಕ್‌ವುಳ್ಳ ವಜ್ರ ಹಾಗೂ ಬಂಗಾರದ ಅಭರಣಗಳನ್ನು ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುವುದು.

200 ಕಿ.ಮೀ. ವ್ಯಾಪ್ತಿ : ಈ ಮಳಿಗೆಯಲ್ಲಿ ಬಂಗಾರ ಕೊಳ್ಳಲು ಕೇವಲ ಜಿಲ್ಲೆಯ ಗ್ರಾಹಕರಲ್ಲದೆ ಚೆಳ್ಳಕೆರೆ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ವಿಜಯನಗರ, ಮೊಳಕಾಲ್ಮೂರು, ಕೂಡ್ಲಿಗಿ, ಹೊಸಪೇಟೆ, ಆಂಧ್ರದ ರಾಯದುರ್ಗ, ಕಲ್ಯಾಣದುರ್ಗ, ಪೆನ್ನ ಒಬಳಾಂ ಸೇರಿದಂತೆ ಸುತ್ತಲಿನ 200 ಕಿ.ಮೀ. ವ್ಯಾಪ್ತಿಯಿಂದ ಬಂಗಾರಕೊಳ್ಳಲು ಈ ಮಳಿಗೆಗೆ ಆಗಮಿಸುತ್ತಾರೆ. ವಿವಾಹ ಕಾರ್ಯಕ್ರಮಗಳಲ್ಲಿ ವಧು ಹಾಗೂ ವರಗಳಿಗೆ ಕೊಡಿಸುವ ಬಂಗಾರವನ್ನು ರಾಜಮಹಲ್‌ನಲ್ಲಿಯೇ ಕೊಡಿಸಬೇಕು ಎಂಬ ಮಾತು ಕೂಡ ನಡೆಯುತ್ತಿದೆ. ಈ ಮಳಿಗೆಯಲ್ಲಿ ಬಂಗಾರ ಕೊಳ್ಳುವುದರಿಂದ ಗುಣಮಟ್ಟದ ಅಭರಣದ ಜತೆಗೆ ಸಮಾಜದಲ್ಲಿ ಹೆಸರು ಬೆಳೆಯುತ್ತಿದೆ ಎಂಬುದು ಗ್ರಾಹಕರ ಮನೋಭಾವವಾಗಿದೆ.

ಕೋಟ್.. ಈ ಮಳಿಗೆಯು 1958ರಿಂದ ಆರಂಭವಾಗಿನಿಂದ ಈವರೆಗೆ ಪ್ರತಿಯೊಬ್ಬರ ಗ್ರಾಹಕರಿಗೆ ಗುಣಮಟ್ಟದ ಬಂಗಾರ ನೀಡುವಲ್ಲಿ ಯಶ್ವಸಿಯಾಗಿದೆ. ಗ್ರಾಹಕರ ವಿಶ್ವಾಸಗಳಿಸಿ ಗುಣಮಟ್ಟದ ವಸ್ತುಗಳನ್ನು ನೀಡುವುದೆ ನಮ್ಮ ಪರಮಗುರಿ. ವ್ಯವಹಾರ ಕೇವಲ ಹಣಕ್ಕೆ ಸಂಬಂಧಿಸಿದೆ. ರಾಜಮಹಲ್‌ನಲ್ಲಿ ಅಭರಣಗಳನ್ನು ಕೊಳ್ಳುವ ಮೂಲಕ ವಿಶ್ವಾಸಾರ್ಹತೆಯ ಪರಿಚಯ ಮಾಡಿಸಿಕೊಡಲಾಗುವುದು. ಮಳಿಗೆಯುವ ಆರವತ್ತು ವರ್ಷಕ್ಕೂ ಅಧಿಕ ಕಳೆದಿದೆ. ಈವರೆಗೆ ಗ್ರಾಹಕರನ್ನು ಹೆಚ್ಚಿಸಿದ್ದೇವೆಯೇ ಹೊರತು ಕಡಿಮೆಯಾಗಿಲ್ಲ.ಅದು ನಮ್ಮ ಅಂಗಡಿ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆ.

- ರಮೇಶ, ಮಾಲೀಕ, ರಾಜ್‌ಮಹಲ್ ಫ್ಯಾನ್ಸಿ ಜುವೆಲ್ಸರ್ಸ್‌, ಬಳ್ಳಾರಿ.

ಕೋಟ್.. ಗ್ರಾಹಕರಿಗೆ ಗುಣಮಟ್ಟದ ವಜ್ರ ಹಾಗೂ ಬಂಗಾರದ ಅಭರಣಗಳನ್ನು ತಲುಪಿಸುವ ನಿಟ್ಟಿನಲ್ಲಿ ರಾಜ್‌ಮಹಲ್ ಫ್ಯಾನ್ಸಿ ಜುವೆಲ್ಸರ್ಸ್‌ ಒತ್ತು ನೀಡುತ್ತಿದೆ. ಹಲವು ವರ್ಷಗಳಿಂದ ಹಣ ಕೂಡಿಟ್ಟು ಅಭರಣ ತೆಗೆದುಕೊಳ್ಳಬೇಕು ಎಂಬ ಗ್ರಾಹಕರ ಕನಸಿಗೆ ಗುಣಮಟ್ಟದ ಅಭರಣ ಒದಗಿಸುವುದೆ ನಮ್ಮ ಉದ್ದೇಶ. ಬಡವರ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿ ಅಭರಣಕೊಳ್ಳಲಿ ಎಂಬ ಉದ್ದೇಶದಿಂದ ಪ್ರತಿ ತಿಂಗಳು ವಿವಿಧ ಸ್ಕೀಮ್ಸ್ ಬಿಡುಗಡೆಗೊಳಿಸಿ ಅನುಕೂಲ ಮಾಡಲಾಗಿದೆ. ಅಲ್ಲದೆ, ಕೆಲವೊಂದು ಹಬ್ಬದ ದಿನಗಳಲ್ಲಿ ವಿಶೇಷ ಕೊಡುಗೆಗಳನ್ನು ನೀಡಿ ಸಹಕಾರ ಮಾಡಲಾಗಿದೆ.

- ಸಾಯಿ ಕಿಷನ್, ರಾಜ್‌ಮಹಲ್ ಫ್ಯಾನ್ಸಿ ಜುವೆಲ್ಸರ್ಸ್‌, ಮಾಲೀಕ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net