

ಬಳ್ಳಾರಿ: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಬೃಹತ್ ಬಹಿರಂಗ ಸಭೆಯ ಭದ್ರತೆಗಾಗಿ 1500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಕೆಎಸ್‌ಆರ್‌ಪಿ ಮತ್ತು ಡಿಎಆರ್ ತುಕಡಿಗಳನ್ನು ನೇಮಕ ಮಾಡಲಾಗಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೂವರು ಎಎಸ್ಪಿ, 10 ಡಿವೈಎಸ್ಪಿ, 37 ಸರ್ಕಲ್ ಇನ್ಸ್‌ಪೆಕ್ಟರ್, 103 ಪಿಎಸ್‌ಐ, 1012 ಪಿಸಿ, 5 ಕೆಎಸ್‌ಆರ್‌ಪಿ, 10 ಡಿಎಆರ್ ತುಕಡಿಗಳನ್ನು ನೇಮಕ ಮಾಡಲಾಗಿದೆ. ಅ.15ರ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್‌ನ 3 ರಿಂದ 5 ಲಕ್ಷ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸೇರುವ ಸಾಧ್ಯತೆ ಇದೆ. ಸಂಚಾರ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಿಲಾಗಿದೆ ಎಂದರು.
ರಾಹುಲ್ ಗಾಂಧಿ ಅವರ ಪಾದಯಾತ್ರೆ ಅ.14 ಹಲಕುಂದಿ ಗ್ರಾಮಕ್ಕೆ ಬರಲಿದೆ. ಅ.15ರ ಬೆಳಗ್ಗೆ 6 ರಿಂದ ಬಳ್ಳಾರಿ ನಗರದ ಕಡೆ ಸಾಗಿ ಎಪಿಎಂಸಿ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಸರ್ಕಲ್, ಕಾಳಮ್ಮ ಸರ್ಕಲ್, ಮೀನಾಕ್ಷಿ ಸರ್ಕಲ್, ಗಡಗಿ ಚೆನ್ನಪ್ಪ ಸರ್ಕಲ್, ರಾಜಕುಮಾರ್ ರಸ್ತೆ ಮೂಲಕ ಮುನ್ಸಿಪಲ್ ಹೈಸ್ಕೂಲ್ ಮೈದಾನ ಸೇರಲಿದೆ. ಅಲ್ಲಿ ಬಹಿರಂಗ ಸಭೆ ನಡೆಯಲಿದೆ. ಅ.14ರ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹೊಸಪೇಟೆ ಬೈಪಾಸ್ ಹಾಗೂ ಬಳ್ಳಾರಿ ಮುಖಾಂತರ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಅನಂತಪುರ ರಸ್ತೆಯ ಬೈಪಾಸ್ ಮುಖಾಂತರ ಸಂಚರಿಸಬೇಕು. ಅ.15 ರಂದು ಮೋತಿ ಸರ್ಕಲ್, ರಾಯಲ್ ಸರ್ಕಲ್, ಯು.ಬಿ.ಸರ್ಕಲ್, ದುರ್ಗಮ್ಮ ಗುಡಿ ಸರ್ಕಲ್, ಕೆಇಬಿ ಸರ್ಕಲ್, ಕೂಲ್‌ಕಾರ್ನರ್ ಸರ್ಕಲ್, ಅನಂತಪುರ ರಸ್ತೆ, ಗೆಸ್ಟ್ ಹೌಸ್ ಸರ್ಕಲ್, ರಾಘವೇಂದ್ರ ಟಾಕೀಸ್ ಸರ್ಕಲ್‌ನಿಂದ ಮುನ್ಸಿಪಲ್ ಕಾಲೇಜ್‌ಗೆ ಬರುವ ವಾಹನಗಳ ಸಂಚಾರವನ್ನು ನಿಬರ್ಂಧಿಸಲಾಗಿದೆ. ಅಂದು ಸಿರುಗುಪ್ಪ ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಎಸ್‌ಪಿ ಸರ್ಕಲ್, ಇನ್‌ಫ್ಯಾಂಟ್ರಿ, ರಸ್ತೆ, ಸುಧಾ ಕ್ರಾಸ್, ಹೊಸಪೇಟೆ ಬೈಪಾಸ್ ರಸ್ತೆ ಮುಖಾಂತರ ಸಂಚರಿಸಬೇಕು. ಹೊಸಪೇಟೆ, ಅನಂತಪುರಂ ಹಾಗೂ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ನಗರದ ಹೊರವಲಯದಲ್ಲಿರುವ ಅನಂತಪುರ-ಹೊಸಪೇಟೆರಿಂಗ್ ರಸ್ತೆಯ ಮುಖಾಂತರ ಸಂಚರಿಸುಬೇಕು ಎಂದರು.
ಸಭೆಗೆ ಬರುವ ಸಾರ್ವಜನಿಕರಿಗೆ ಆಯಾ ರಸ್ತೆಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನಗಳನ್ನು ಪಾಕಿರ್ಂಗ್ ಮಾಡಿ ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಬರಬೇಕಿದೆ. ಅಧೀಕೃತ ಪಾಸ್ ಹೊಂದಿದ ವಿಐಪಿ ವಾಹನಗಳಿಗೆ ಬುಡಾ ಅವರಣ ಒಳಗಡೆ, ಐಬಿ ಗೆಸ್ಟ್ ಹೌಸ್, ದುರುಗಮ್ಮ ದೇವಸ್ಥಾನದ ಖಾಲಿ ಜಾಗ ಹಾಗೂ ಕೇಂದ್ರ ಕಾರಾಗೃಹದ ಪಕ್ಕದಲ್ಲಿರುವ ಜಾಗದಲ್ಲಿ ಪಾಕಿರ್ಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಡ್ರೋನ್ ಕ್ಯಾಮೆರಾ ನಿಷೇಧ: ಭಾರತ್ ಜೋಡೋ ಪಾದಯಾತ್ರೆಯ ಮಾರ್ಗ ಮತ್ತು ಬಹಿರಂಗ ಸಭೆ ನಡೆಯುವ ಸ್ಥಳಗಳಲ್ಲಿ ಅ.14 ರಿಂದ 16 ರವರೆಗೆ ಡ್ರೋನ್ ಹಾರಾಟಕ್ಕೆ ನಿಬರ್ಂಧ ಹೇರಲಾಗಿದೆ. ಹಲಕುಂದಿಯ ಗ್ರಾಮದ ಬಳಿ ಗಣ್ಯರು ವಾಸ ಮಾಡುವ ಸ್ಥಳ ಹಾಗೂ ಅದರ ಸುತ್ತಲಿನ ಪ್ರದೇಶ, ಬಳ್ಳಾರಿ ನಗರಕ್ಕೆ ಬರುವ ಬೆಂಗಳೂರು ರಸ್ತೆ, ಕನ್ನಡ ಭವನ, ರಾಯಲ್ ಸರ್ಕಲ್, ರಾಜ್‌ಕುಮಾರ್ ರಸ್ತೆ, ಸಮಾವೇಶದ ಮುನ್ಸಿಪಲ್ ಹೈಸ್ಕೂಲ್ ಮೈದಾನ ಮತ್ತು ಮೈದಾನದ ಸುತ್ತಲಿನ ಪ್ರದೇಶಗಳು ಕೆಇಬಿ, ಸರ್ಕಲ್, ಸಂಗನಕಲ್ಲು ರಸ್ತೆ ಡ್ರೋನ್ ಹಾರಾಟದ ನಿಷೇಧಿಸಲಾಗಿದೆ ಎಂದರು.