ರಾಘವ ಸರ್ವ ಶ್ರೇಷ್ಠ ಮಾನವತಾವಾದಿ

Published on

ಬಳ್ಳಾರಿ : ಬಳ್ಳಾರಿ ರಾಘವರು ಬಹುಮುಖಿ ನಟ , ನಿರ್ದೇಶಕ, ಬರಹಗಾರ, ವಕೀಲ ಮಾತ್ರವಲ್ಲದೆ ಅವರು ಸರ್ವ ಶ್ರೇಷ್ಠ ಮಾನವತಾವಾದಿ ಎಂದು ಲೇಖಕ ಸಿದ್ದರಾಮ ಕಲ್ಮಠ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ(ಮಾ.ಪು) ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ಟಿ. ರಾಘವಾಚಾರ್ಯ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಘವರು ನಾಟಕಗಳ ಮೂಲಕ ಸಮಾಜದಲ್ಲಿದ್ದ ಮೂಢನಂಬಿಕೆ, ಅಸ್ಪಶ್ಯತೆ ಮತ್ತು ಸಮಾಜದ ನ್ಯೂನ್ಯತೆಗಳನ್ನು ಹೋಗಲಾಡಿಸಲು ಪರಿಶ್ರಮಿಸಿದರು. ಅವರಿಗೆ ಆಧುನಿಕ ರಂಗಭೂಮಿಯ ಬಗ್ಗೆ ಸ್ವಷ್ಟ ನಿಲುವುಗಳಿದ್ದವು. ಕಲಾವಿದರಿಗೆ ಸೂಕ್ತ ರಂಗ ಶಿಕ್ಷಣದ ಅವಶ್ಯಕತೆ ಇದೆಯೆಂದೂ, ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ಅಭಿನಯಿಸಬೇಕು ಎಂದು ಹೇಳಿದರು. ವರ್ತಮಾನದ ವಸ್ತು ವಿಷಯಗಳ ನಾಟಕಗಳನ್ನು ತೆರೆಯ ಮೇಲೆ ತಂದು, ದೇಶ ವಿದೇಶಗಳನ್ನು ಪರ್ಯಟನೆ ಮಾಡಿದರಲ್ಲದೆ ಅವರಿಗೆ ಅನೇಕ ಭಾಷೆಗಳ ಮೇಲೆ ಹಿಡಿತವಿತ್ತು ಎಂದರು.

ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚೆನ್ನಪ್ಪ ಮಾತನಾಡಿ, ಹಾಡು ಮುಟ್ಟದ ಸೊಪ್ಪಿಲ್ಲ ರಾಘವರು ಅಭಿನಯಸದ ಪಾತ್ರಗಳಿಲ್ಲ. ಅವರು ಕಲೆ ವಿಲಾಸಕಲ್ಲ , ವಿಕಾಸಕ್ಕಾಗಿ ಎಂಬ ರಂಗಭೂಮಿಯ ಸೂತ್ರವನ್ನು ತಿಳಿಸಿಕೊಟ್ಟರು. ಕನ್ನಡ ಮತ್ತು ತೆಲುಗು ನಾಟಕ ರಂಗಕ್ಕೆ ಅವರು ಸಲ್ಲಿಸಿದ ಸೇವೆ ಅನನ್ಯ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net