ರಾಘವ ಮರೆಯಲಾಗದ ಮಹಾರತ್ನ

Published on

ಬಳ್ಳಾರಿ ; ರಾಘವರು ಆರು ದಶಕಗಳ ಹಿಂದೆ ಅಭಿನಯದ ಮೂಲಕ ದೇಶ ಹಾಗೂ ವಿದೇಶಗಳಲ್ಲಿ ಹೆಸರುಗಳಿಸಿದವರು ಎಂದು ಸುರವರ ಪ್ರತಾಪರೆಡ್ಡಿ ತೆಲುಗು ವಿಶ್ವವಿದ್ಯಾಲಯದ ಉಪಕುಲಪತಿ ವೇಲಿ ದಂಡ ನಿತ್ಯಾನಂದರಾವ್ ಹೇಳಿದರು.

ನಗರದ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ರಾಘವ ಅವರ 145ನೇ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ನಾಟಕೋತ್ಸವ ಹಾಗೂ ತೆಲುಗು ಭಾಷೆಯ ಶ್ರೇಷ್ಠ ನಟರಿಗೆ ರಾಘವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ತೆಲುಗು , ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರಂತರವಾಗಿ ಅಭಿನಯಿಸಿ ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ಮಾಡಬೇಕೆಂದು ಹೇಳಿದರು. ಅದರಂತೆ ರಂಗಭೂಮಿಗೆ ಹೊಸ ಮಾರ್ಪಾಡು ತಂದ ಧೀಮಂತ ರಾಘವರ ಕಲಾ ಸೇವೆ ಅನನ್ಯವಾದದು ಎಂದು ಹೇಳಿದರು.

ರಾಘವರ ಹೆಸರಿನ ರಾಜ್ಯ ಪ್ರಶಸ್ತಿ ಪಡೆದ ಆಂಧ್ರ ನಾಟಕ ಅಕಾಡೆಮಿ ಅಧ್ಯಕ್ಷ ಗುಮ್ಮಡಿ ಗೋಪಾಲಕೃಷ್ಣ ಮಾತನಾಡಿ, ರಾಘವರ ಹೆಸರಿನ ಪ್ರಶಸ್ತಿ ಸ್ವೀಕರಿಸಿ ಜವಾಬ್ದಾರಿ ಹೆಚ್ಚಿದೆ. ಅವರು ಆ ಕಾಲದ ನಾಟಕಗಳಿಗೆ ಹೊಸ ರೂಪವನ್ನು ಕೊಟ್ಟವರು. ತಮ್ಮ ಇಡೀ ಬದುಕನ್ನು ರಂಗಭೂಮಿಗೆ ಸಮರ್ಪಿಸಿದ ರಾಘವರು ಎಂದೂ ಮರೆಯಲಾಗದ ಮಹಾರತ್ನ, ಅವರೊಬ್ಬ ಅಭಿಜಾತ ಕಲಾವಿದ ಎಂದು ವ್ಯಕ್ತಿತ್ವವನ್ನು ಕೊಂಡಾಡಿದರು.

ಬಳ್ಳಾರಿ ರಾಘವರ ರಾಜ್ಯ ಪ್ರಶಸ್ತಿಯನ್ನು ಸತತವಾಗಿ ಸುಮಾರು 17 ವರ್ಷಗಳಿಂದ ರಾಘವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಮತ್ತು ನಾಟಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಸಾಮಾನ್ಯ ಮಾತಲ್ಲ, ಕಲೆಯ ಮೇಲೆ ಗೌರವ ಮತ್ತು ನಾಟಕ ರಂಗ ಬೆಳೆಸಬೇಕು ಎನ್ನುವ ಛಲ ಇದ್ದವರಿಗೆ ಮಾತ್ರ ಸಾಧ್ಯವಾಗುತ್ತದೆ ಎಂದರು.

ಬಳಿಕ ಶ್ರೀಸಾಯಿಬಾಬ ನಾಟ್ಯ ಮಂಡಳಿ ವಿಜಯವಾಡದ ಸಂಸ್ಕಾರ ಭಾರತಿ ಅಧ್ಯಕ್ಷ ಡಾ. ಪಿ.ವಿ.ಎನ್. ಕೃಷ್ಣ ರವರ ನಿರ್ದೇಶನದ ಜಯಹೋ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಎಂಬ ನಾಟಕ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net