ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಿ, ಕೆಯುಡಬ್ಲ್ಯುಎಸ್‌ಡಿಬಿ ಅಧಿಕಾರಿಗೆ ಮೇಯರ್ ಎಂ.ರಾಜೇಶ್ವರಿ ಸೂಚನೆ

181122 Ballari Mayor Visit Work Place
ಬಳ್ಳಾರಿ ಹೊರವಲಯದ ಭತ್ರಿಯಲ್ಲಿ ಒಳಚರಂಡಿ ವೆಟ್‌ವೆಲ್ ಕಾಮಗಾರಿಯನ್ನು ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು ಪರಿಶೀಲಿಸಿದರು.
Published on

ಬಳ್ಳಾರಿ: ನಗರ ಹೊರವಲಯದ 34ನೇ ವಾರ್ಡ್‌ನ ಭತ್ರಿಯಲ್ಲಿ ನಡೆದಿರುವ ಒಳಚರಂಡಿ ವೆಟ್‌ವೆಲ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಕೆಯುಡಬ್ಲ್ಯುಎಸ್‌ಡಿಬಿ ಅಧಿಕಾರಿ ಗಂಗಾಧರಗೌಡಗೆ ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಸೂಚಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಸ್ಲಂ ಬೋರ್ಡ್ ಇಲಾಖೆಯಿಂದ 5 ಮನೆಗಳ ಬೇಸ್ಮೆಂಟ್ ಕುಣಿಗಳು ತೆಗೆದು ಸುಮಾರು 6 ತಿಂಗಳಿಂದ ಕೆಲಸ ಮಾಡದೇ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ, ಸ್ಥಳಕ್ಕೆ ಹೋಗಿ ಸ್ಲಂ ಬೋರ್ಡ್ ಡೈರೆಕ್ಟರ್ ಕೃಷ್ಣಾರೆಡ್ಡಿಯನ್ನು ತರಾಟೆಗೆ ತೆಗೆದುಕೊಂಡರು. ಮನೆಗಳನ್ನು ಶೀಘ್ರ ನಿರ್ಮಾಣ ಮಾಡಬೇಕು ಎಂದು ಎಚ್ಚರಿಕೆ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net