ಕನಿಷ್ಠ ಬೆಂಬಲ ಯೋಜನೆಯಡಿ ಜೋಳ ಖರೀದಿ

Published on

ಬಳ್ಳಾರಿ : ಪ್ರಸ್ತಕ ಸಾಲಿನ ಹಿಂಗಾರಿನಲ್ಲಿ ಬೆಳೆದ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸಕೀನ ತಿಳಿಸಿದ್ದಾರೆ. ನೋಂದಣಿ ಈಗಾಗಲೇ ಪ್ರಾರಂಭಗೊಂಡಿದ್ದು, ಮೇ 31 ರ ವರೆಗೆ ಖರೀದಿಸಲಾಗುವುದು. ತಾಲೂಕಿನ ಎಪಿಎಂಸಿ ಮತ್ತು ರೂಪನಗುಡಿ, ಸಿರುಗುಪ್ಪ, ಕರೂರು, ತಾಳೂರು, ಹಚ್ಚೋಳ್ಳಿ, ಕಂಪ್ಲಿ, ಎಮ್ಮಿಗನೂರು, ಕುರುಗೋಡು ಮತ್ತು ಸಂಡೂರು ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುವುದು.

ಮಾಹಿತಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಅಥವಾ ಸೈಯದ್ ವಸೀಮ್ ಪಾಷ (ಮೊ.9449864453)ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net