ಪುರಾಣ ಪ್ರವಚನ ಮತ್ತು ತುಲಾಭಾರ ಕಾರ್ಯಕ್ರಮ

Published on

ಬಳ್ಳಾರಿ : ಜಗದ್ಗುರು ರೇಣುಕಾಚಾರ್ಯರ ಜಯಂತಿ ಅಂಗವಾಗಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪುರಾಣ ಪ್ರವಚನ ಕಾರ್ಯಕ್ರಮ ಹಾಗೂ ಶ್ರೀಶರಣ ಸಿದ್ದಯ್ಯತಾತನವರ 16ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾ.3ರಿಂದ ಮಾ.12ರವರೆಗೆ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದ ಆಶ್ರಮದಲ್ಲಿ ನಡೆಯಲಿದೆ.

ಪ್ರತಿದಿನ ಸಂಜೆ 6.30 ರಿಂದ 8.30ರವರೆಗೆ ಪುರಾಣ ಪ್ರವಚನ ಕಾರ್ಯಕ್ರಮ ಹಾಗೂ ಮಾ.2ರಂದು ಸಂಜೆ 7 ಗಂಟೆಗೆ ತುಲಾಭಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಉರವಕೊಂಡ ಗವಿಮಠ ಸಂಸ್ಥಾನದ ಉತ್ತರಾಧಿಕಾರಿ ಡಾ. ಕರಿಬಸವ ರಾಜೇಂದ್ರ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಜರುಗಲಿದೆ.

ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ಡಾ. ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದಾರೆ. ವೆಂಕಟಾಪುರದ ದತ್ತಾಶ್ರಮದ ಪರತತ್ವಾನಂದ ಅವಧೂತರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ತಾಳೂರಿನ ಅಮ್ಮಸಂಸ್ಥೆ ರುದ್ರಗೌಡ ಅವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ.

ವೀ.ವಿ ಸಂಘದ ಮಾಜಿ ಅಧ್ಯಕ್ಷ, ಉಡೇದ ಬಸವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾ.12ರಂದು ಬೆಳಗ್ಗೆ 7 ಗಂಟೆಗೆ ತಾರಾನಗರದ ಎಸ್.ಎಂ.ಚಂದ್ರಯ್ಯಸ್ವಾಮಿಗಳು ವೀರಗಾಸೆ ನಡೆಸಿಕೊಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net