ಮಾನಸಿಕ ಖಿನ್ನತೆ ಪಿಎಸ್‌ಐ ಪತ್ನಿ ಆತ್ಮಹತ್ಯೆ

Published on

ಬಳ್ಳಾರಿ : ಮಾನಸಿಕ ಖಿನ್ನತೆಗೆ ಒಳಗಾಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ತಾಲೂಕಿನ ಮೋಕಾ ಪೊಲೀಸ್ ಠಾಣೆಯ ಪಿಎಸ್‌ಐ ಕಾಳಿಂಗ ಅವರ ಪತ್ನಿ ಚೈತ್ರಾ (33) ಮೃತ. ದಂಪತಿಯೂ ಮೂಲತಃ ವಿಜಯನಗರ ಜಿಲ್ಲೆಯ ಮಲಪನಗುಡಿ ನಿವಾಸಿಯಾಗಿದ್ದರು. ಕರ್ತವ್ಯದ ಹಿನ್ನೆಲೆ ಮೋಕಾದಲ್ಲಿ ವಾಸವಿದ್ದರು. ಗುರುವಾರವೇ ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದರು. ಸ್ವಾತಂತ್ರೊೃೀತ್ಸವ ಅಂಗವಾಗಿ ಪಿಎಸ್‌ಐ ಕಾಳಿಂಗ ಅವರು ಕರ್ತವ್ಯಕ್ಕೆ ಹಾಜರಾದ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಚೈತ್ರಾ ಪತಿ, ಓರ್ವ ಪುತ್ರ, ಪುತ್ರಿಯನ್ನು ಆಗಲಿದ್ದಾರೆ. ಕಳೆದ ಎರಡ್ಮೂರು ವರ್ಷದಿಂದ ಮಾನಸಿಕ ಖಿನ್ನತೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕಳೆದ ಎರಡು ವರ್ಷದಲ್ಲಿ ಚೈತ್ರಾ ಸೇರಿ ಕುಟುಂಬದ ನಾಲ್ವರು ನಾನಾ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು. ಈ ಕುರಿತು ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net