ವೈವಾಹಿಕ ಜೀವನಕ್ಕೆ ಅವಕಾಶ ಒದಗಿಸಿ

Published on

ಬಳ್ಳಾರಿ ; ನನ್ನ ವೈವಾಹಿಕ ಹಕ್ಕನ್ನು ರಕ್ಷಿಸಿ, ನನ್ನ ಗಂಡನನ್ನು ಜತೆ ಬಾಳಲು ಅವಕಾಶ ಕೊಡಿ ಎಂದು ಯುವತಿ ಡಿ.ದುರ್ಗಾಶ್ರೀ ಹೇಳಿದರು.

ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಕೆಆರ್‌ಎಸ್ ಪಕ್ಷದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿರಗುಪ್ಪ ತಾಲೂಕಿನ ಈರಣ್ಣ ಕ್ಯಾಂಪ್ ನಿವಾಸಿ ಹೊನ್ನುರ ಸ್ವಾಮಿ ಜತೆ ಮನೆಯವರ ವಿರೋಧದಿಂದ ಮನೆ ಬಿಟ್ಟು ಹೋಗಿ ಮೋಕಾ ಬಳಿಯ ದೇವಸ್ಥಾನದಲ್ಲಿ ಕಳೆದ ತಿಂಗಳು ಮದುವೆಯಾಗಿರುವೆ. ಎರಡ್ಮೂರು ದಿನ ಒಟ್ಟಿಗೆ ನಮ್ಮ ಸಂಬಂಧಿಕರ ಮನೆಯಲ್ಲಿ ಜತೆಯಲ್ಲಿದ್ದೇವು. ನನ್ನ ಗಂಡನನ್ನು ಹಣ ಕೊಡಬೇಕು ಎಂದು ಸಿರಿಗೇರಿ ಪೊಲೀಸ್ ಠಾಣೆಗೆ ಕರೆಸಿಕೊಂಡ ಹುಡುಗನ ಕುಟುಂಬಸ್ಥರು ಅಲ್ಲಿಂದ ಅವರನ್ನು ಕರೆದುಕೊಂಡು ಹೋಗಿ ನಾಪತ್ತೆ ಮಾಡಿದ್ದಾರೆ. ಇದರ ಬಗ್ಗೆ ದೂರು ನೀಡಲು ಯತ್ನಿಸಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ಕಳೆದ ಒಂದು ತಿಂಗಳಿಂದ ನನ್ನ ನಾಪತ್ತೆಯಾಗಿದ್ದು ನನ್ನ ಗಂಡನನ್ನು ಹುಡುಕಿ ಕೊಟ್ಟು ನ್ಯಾಯ ಕೊಡಿಸಿ ಎಂದು ಹೇಳಿದರು.

ಕೆಆರ್‌ಸಿ ಪಕ್ಷದ ಎಸ್‌ಸಿ, ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಪ.ಯ.ಗಣೇಶ ಮಾತನಾಡಿ, ಹುಡುಗ ಹಾಗೂ ಹುಡುಗಿ ಮದುವೆಯಾಗಲು ಮತ್ತು ದಾಂಪತ್ಯ ಜೀವನ ನಡೆಸಲು ಬೇಕಾದ ಎಲ್ಲ ಹಕ್ಕುಗಳಿವೆ. ಹಾಗಾಗಿ ಈ ಕುರಿತು ಅಗತ್ಯ ಕ್ರಮಕೈಗೊಂಡು ಈ ಮಗುವಿನ ದಾಂಪತ್ಯ ಜೀವನ ನಡೆಸಲು ಅಗತ್ಯಪಡಿಸಿದ ಕಾನೂನುಗಳ ಅಡಿಯಲ್ಲಿ ನ್ಯಾಯ ದೊರಕಿಸ ಕೊಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net