ದಾಖಲೆ ನೀಡಿ, ಬಿ-ಖಾತಾ ಪಡೆದುಕೊಳ್ಳಿ

Published on

ಬಳ್ಳಾರಿ ; ಅನಧೀಕೃತ ಬಡಾವಣೆಗಳನ್ನು ಹೊಂದಿರುವ ಆಸ್ತಿಗಳಿಗೆ ಇ-ಆಸ್ತಿ ಸೃಜನೆ ಮಾಡಿ ಬಿ-ಖಾತಾ ವಿತರಿಸುವ ವ್ಯವಸ್ಥೆ ಜಾರಿಯಲ್ಲಿದ್ದು ಪಾಲಿಕೆಯ ವ್ಯಾಪ್ತಿಯ ಆಸ್ತಿ ಮಾಲೀಕರು ದಾಖಲೆ ಸಲ್ಲಿಸಿ ಬಿ-ಖಾತಾ ಪಡೆದುಕೊಳ್ಳಿ ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು.

ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬಿ-ಖಾತಾ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ತಿಳಿಸಲು ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸೆ. 10, 2024 ರ ಕ್ಕಿಂತ ಮುಂಚಿನ ಆಸ್ತಿಗಳಿಗೆ ಈ ಕಾಯ್ದೆಯು ಅನ್ವಯವಾಗುತ್ತದೆ. ಈ ಅಭಿಯಾನವನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು. ಆಸ್ತಿಯ ಮಾಲೀಕರು, ಪಾಲಿಕೆ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ, 07 ದಿನಗಳ ಒಳಗಾಗಿ ಬಿ-ಖಾತಾ ಪಡೆಯಬಹುದು. ಜನರ ಅನುಕೂಲಕ್ಕಾಗಿ ಪಾಲಿಕೆ ವ್ಯಾಪ್ತಿಯ ವಾರ್ಡ್‌ವಾರು ಸ್ವಯಂ-ಸೇವಕರನ್ನು ನೇಮಿಸಲಾಗಿದೆ. ಮನೆ-ಮನೆಗೆ ಭೇಟಿ ನೀಡಿ ಪೂರಕ ದಾಖಲೆ ಸಂಗ್ರಹಿಸಿ ನೋಂದಣಿಗೆ ಕ್ರಮವಹಿಸುತ್ತಾರೆ. ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗಬಾರದು, ನೇರವಾಗಿ ಪಾಲಿಕೆ ಕಚೇರಿಗೆ ಭೇಟಿ ನೀಡಬಹುದು. ಸಹಾಯವಾಣಿ ಸಂಖ್ಯೆ ಆರಂಭಿಸಲಾಗುವುದು ಎಂದರು.

ನಗರದ ಗಡಿಯಾರ ಸ್ಥಂಭ ಉದ್ಘಾಟನೆ ಸಂಬಂಧಿಸಿದಂತೆ ಕ್ಲಾಕ್ ಟವರ್ ಪಕ್ಕದಲ್ಲಿ ಅಂಫಿ ಥಿಯೆಟರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಒಂದೂವರೆ ತಿಂಗಳೊಳಗೆ ಪೂರ್ಣಗೊಳ್ಳವುದು ಸಿಎಂ ಹಾಗೂ ಡಿಸಿಎಂ ಉದ್ಘಾಟಿಸಲಿದ್ದಾರೆ.

ಪಾಲಿಕೆಯ ಆಯುಕ್ತ ಖಲೀಲ್ ಸಾಬ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ವಸತಿ 11,423, ವಾಣಿಜ್ಯ 5,201, ಕೈಗಾರಿಕೆ 265 ಮತ್ತು 18,679 ಖಾಲಿ ನಿವೇಶನಗಳು ಸೇರಿ ಒಟ್ಟು 35,568 ಅನಧಿಕೃತ ಬಡಾವಣೆಗಳಿವೆ ಎಂದು ಮಾಹಿತಿ ನೀಡಿದರು.

ನೋಡೆಲ್ ಅಧಿಕಾರಿಗಳ ನೇಮಕ : ನಗರದ ವಾರ್ಡ ನಂ.1, 15 ರಿಂದ 24 ಹಾಗೂ 36, 37 ರ ನಿವಾಸಿಗಳು ಮಹಾನಗರಪಾಲಿಕೆ ವಲಯ ಕಚೇರಿ-1ರ ಆಯುಕ್ತ ಗುರುರಾಜ್ ಸೌದಿ(ಮೊ.9482950502), ವಾರ್ಡ್ ನಂ.2 ರಿಂದ 14 ರ ನಿವಾಸಿಗಳು ಮಹಾನಗರಪಾಲಿಕೆ ವಲಯ ಕಚೇರಿ-2ರ ಆಯುಕ್ತ ಫಣಿರಾಜ್(ಮೊ.9483833135) ಮತ್ತು ವಾರ್ಡ್ ನಂ.25 ರಿಂದ 35 ಹಾಗೂ 38, 39 ರ ನಿವಾಸಿಗಳು ಮಹಾನಗರಪಾಲಿಕೆ ವಲಯ ಕಚೇರಿ-3ರ ಆಯುಕ್ತ ಮಲ್ಲಿಕಾರ್ಜುನ (ಮೊ.9448493344) ಸಂಪರ್ಕಿಸಬಹುದು.

ಇ-ಖಾತಾ ಹೆಲ್ಪ್ ಡೆಸ್ಕ್: ಮಹಾನಗರ ಪಾಲಿಕೆ ವಲಯ ಕಚೇರಿ-1ರ ಕಂದಾಯ ನೀರಿಕ್ಷಕ ವೀರೇಶಯ್ಯ ದೂ.08392-294708, ಮೊ. 7019141268 (ವಾರ್ಡ್ ನಂ.1, 15 ರಿಂದ 24 ಹಾಗೂ 36, 37). ವಲಯ ಕಚೇರಿ-2ರ ಸಹಾಯಕ ಕಂದಾಯ ಅಧಿಕಾರಿ ಎಸ್.ಕೆ.ಅಬ್ದುಲ್ ಖಾದರ 08392-294745, ಮೊ.9845469264 (ವಾರ್ಡ ನಂ.2 ರಿಂದ 14). ವಲಯ ಕಚೇರಿ-3ರ ಕಂದಾಯ ನಿರೀಕ್ಷಕ ಕೆ.ವೆಂಕಟೇಶ ದೂ.08392-294753, ಮೊ.9986174981 (ವಾರ್ಡ ನಂ.25 ರಿಂದ 35 ಹಾಗೂ 38, 39) ಗೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net