ಸಾಗುವಳಿದಾರರಿಗೆ ಹಕ್ಕು ಪತ್ರಕ್ಕಾಗಿ ಪ್ರತಿಭಟನೆ

Published on

ಬಳ್ಳಾರಿ : ಅರಣ್ಯಭೂಮಿ ಹಾಗೂ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಇಲ್ಲಿನ ಡಿಸಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ ಮಾತನಾಡಿ, ರಾಜ್ಯಾದ್ಯಾಂತ ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ 2.84.625 ಕ್ಕೂ ಹೆಚ್ಚು ಅರಣ್ಯ ಉತ್ಪನ್ನ ಉಳಿಮೆದಾದರು ಹಕ್ಕು ಮಂಡಿಸಿ ಅರ್ಜಿ ಸಲ್ಲಿಸಿದ್ದಾರೆ. ಕೇವಲ 16,136 ಅರ್ಜಿಗಳನ್ನು ಪುರಸ್ಕರಿಸಿ 2,14,710 ಅರ್ಜಿಗಳನ್ನು ತಿರಸ್ಕೃತ ಅಥವಾ ವಿಲೆವಾರಿಗೆ ಬಾಕಿ ಉಳಿಸಲಾಗಿದೆ. ಸಂಡೂರು ತಾಲೂಕು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 1612 ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಇತರೆ 2138 ಜನ ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದಾರೆ. ಭೂಮಿ ಸಾಗುವಳಿ ಮಾಡುವ ಬಡ ಹಾಗೂ ಅನಕ್ಷರಸ್ಥ ಸಾವಿರಾರು ರೈತರು ಅರ್ಜಿ ಸಲ್ಲಿಸದವರು ಸೇರಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಅರಣ್ಯ ಹಕ್ಕು ಕಾಯಿದೆಯಡಿ ಸಾಗುವಳಿ ಭೂಮಿ ಹಕ್ಕು ಪತ್ರ ಪಡೆಯಲು ಅರ್ಹರಿದ್ದಾರೆ. ಆದರೆ, ಇಚ್ಚಾಶಕ್ತಿ ಕೊರತೆಯಿಂದಾಗಿ ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರವನ್ನು ನೀಡದೆ ಭೂಮಿಯಿಂದ ವಂಚಿಸಲಾಗಿದೆ. ಅರ್ಜಿಗಳನ್ನು ಸ್ವೀಕೃತ ಹಾಗೂ ಹಿಂಬರಹವನ್ನು ನೀಡಿರುವುದಿಲ್ಲ. ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ ರೈತರನ್ನು ವಂಚಿಸಿ ಸಾಗುವಳಿ ಪತ್ರ ನೀಡಲು ನಿರಾಕರಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ರೈತರ ಕಲ್ಯಾಣ ಯೋಜನೆಗಳ ಪ್ರಯೋಜನೆಯನ್ನು ಪಡೆಯುವಲ್ಲಿ ರೈತರು ವಂಚಿಸಿದ್ದಾರೆ. ದೊಡ್ಡ ದೊಡ್ಡ ಬಂಡವಾಳದಾರರು, ಗಣಿ ಮಾಲೀಕರಿಗೆ ಉದಾರವಾಗಿ ನೂರಾರು ಹೆಕ್ಟೇರ್ ಭೂಮಿಯನ್ನು ನೀಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net