ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Published on

ಬಳ್ಳಾರಿ ; ಬೆಳಗಾವಿಯಲ್ಲಿ ಕರ್ನಾಟಕ ಸಾರಿಗೆ ವಾಹನ ಚಾಲಕ ಹಾಗೂ ನಿರ್ವಾಹಕನ ಮೇಲೆ ಎಂಇಎಸ್ ಮತ್ತು ಶಿವಸೇನೆ ಮರಾಠಿ ಬೆಂಬಲಿಗರ ಹಲ್ಲೆ ಖಂಡಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಕನ್ನಡ ಹಿತ ರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ನಾಯಕರ ಯುವಸೇನೆ ಮತ್ತು ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿಯು ಸೋಮವಾರ ಪ್ರತಿಭಟಿಸಿತು.

ಬಸ್ ಟಿಕೆಟ್ ವಿಚಾರದಲ್ಲಿ ಮರಾಠ ಪುಂಡರು ಚಾಲಕ ಮತ್ತು ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೆ, ಕರ್ನಾಟಕ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿರುವುದು ಕನ್ನಡಿಗರೇ ಕನ್ನಡಿಗರನ್ನು ಹತ್ತಿಕ್ಕುವ ಹೀನ ಕೃತ್ಯಯಾಗಿದೆ. ಈ ಮರಾಠಿಗರ ದಬ್ಬಾಳಿಕೆ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ನಡೆಯುತ್ತಿದೆ. ಕನ್ನಡಿಗರು ಎದುರುವಂತರಲ್ಲ ಬೆಳಗಾವಿಯು ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿದೆ. ಇದನ್ನು ಕಿತ್ತುಕೊಳ್ಳುವ ಪ್ರಯತ್ನ ಯಾವ ಮೂರ್ಖ ಎಂಇಎಸ್ ಮತ್ತು ಶಿವಸೇನಾ ನಾಡದ್ರೋಹಿಗಳ ಮಹಾರಾಷ್ಟ್ರ ಮರಾಠಿಗಳಿಂದ ಸಾಧ್ಯವಿಲ್ಲ. ಆದರೆ, ರಾಜ್ಯದ ಜನಪ್ರತಿನಿಧಿಗಳು ರಾಜಕೀಯ ಇಚ್ಛಾ ಶಕ್ತಿಗೋಸ್ಕರ ಮರಾಠಿಗರನ್ನು ಬೆಂಬಲಿಸುತ್ತ ಬಂದು ಕನ್ನಡಿಗರನ್ನು ಕುಗ್ಗಿಸುವಂತಹ ಕೆಲಸವನ್ನು ಮಾಡುತ್ತಿರುವುದು ವಿಪರ್ಯಾಸವಾಗಿದೆ. ಇಂತಹ ದುರದುಷ್ಟರನ್ನು ಕನ್ನಡ ಪರ ಸಂಘಟನೆಗಳು ಎಂದಿಗೂ ಸಹಿಸುವುದಿಲ್ಲ. ಹೀನ ಕೃತ್ಯ ಮಾಡುವಂತಹ ಯಾವುದೇ ಶಕ್ತಿ ಇರಲಿ ಎದುರಿಸುವ ಶಕ್ತಿ ಕನ್ನಡಪರ ಹೋರಾಟಗಾರರಿಗೆ ಇದೆ. ಕೂಡಲೇ ರಾಜ್ಯ ಸರ್ಕಾರ ಹಲ್ಲೆ ನಡೆಸಿದವರನ್ನು ಕಾನೂನು ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸುವುದಾಗಿ ಪ್ರತಿಭಟನಕಾರರು ಸರ್ಕಾರಕ್ಕೆ ಎಚ್ಚರಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net