ನಡವಳಿಗಳು ಖಂಡಿಸಿ ಪ್ರತಿಭಟನೆ

Published on

ಬಳ್ಳಾರಿ : ತಾಲೂಕು ಮತ್ತು ನಗರದಲ್ಲಿ ಚಿನ್ನ, ಬೆಳ್ಳಿ ಅಭರಣದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಉದ್ಯಮದ ವರ್ತಕರು ಮತ್ತು ಕೆಲಸಗಾರರಿಗೆ ತನಿಖೆ ರೂಪದಲ್ಲಿ ಕಾನೂನು ಬಾಹಿರ ಹಿಂಸೆ ನೀಡುತ್ತಿರುವುದನ್ನು ಖಂಡಿಸಿ, ಇಲ್ಲಿನ ಡಿಸಿ ಕಚೇರಿ ಮುಂಭಾಗದಲ್ಲಿ ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಸಂಘದಿಂದ ಸೋಮವಾರ ಧರಣಿ ನಡೆಸಿದರು.

ಕಳ್ಳತನದ ಆರೋಪಿಗಳ ಮೌಖಿಕ ಹೇಳಿಕೆಗಳ ಆಧಾರದ ಮೇಲೆ ವ್ಯಾಪಾರಿಗಳು ಮತ್ತು ಕೆಲಸಗಾರರನ್ನು ವಿಚಾರಣೆಯ ನೆಪದಲ್ಲಿ ಬೆದರಿಸಿ, ಅವರಿಂದ ಚಿನ್ನ, ಬೆಳ್ಳಿ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವುದು. ವ್ಯಾಪಾರಿಗಳು ಹಾಗೂ ಕೆಲಸಗಾರರನ್ನು ಠಾಣೆಗೆ ಕರೆದುಕೊಂಡು ಹೋಗಿ ಅಮಾನವೀಯವಾಗಿ ವರ್ತಿಸುವುದು. ಬಂಧಿತ ಆರೋಪಿಗಳನ್ನು ತಕ್ಷಣವೇ ನ್ಯಾಯಾಲಯಕ್ಕೆ ಹಾಜರುಪಡಿಸದೆ ಅಕ್ರಮ ಬಂಧನದಲ್ಲಿ ಇರಿಸುವುದು. ವಿಚಾರಣೆಗೆ ಮುನ್ನ ಪದಾಧಿಕಾರಿಗಳನ್ನು ಭೇಟಿ ಮಾಡದೇ, ಕೆಲಸದ ಸ್ಥಳದಲ್ಲೇ ತನಿಖೆ ನಡೆಸುವುದು. ಕಾನೂನು ರೀತಿಯ ಮಾನವೀಯತೆಯ ಹಿನ್ನಲೆಯಲ್ಲಿ ಕ್ರಮಕೈಗೊಳ್ಳದೇ ಕಾನೂನು ಮೀರಿ ವರ್ತಿಸುವುದನ್ನು ಖಂಡಿಸಿದೆ. ಇನ್ನೂ ಅನೇಕ ರೀತಿಯ ನಡವಳಿಗಳನ್ನು ಖಂಡಿಸಿ ಕಾನೂನು ರೀತಿಯಲ್ಲಿ ಕಳವು ಪ್ರಕರಣಗಳ ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net